ಗಾಂಧಿನಗರ: ಕರ್ನಾಟಕ ಪಬ್ಲಿಕ್ ಸ್ಕೂಲ್ ಮೈದಾನದಲ್ಲಿ ತಾಲೂಕು ಮಟ್ಟದ ಕಾಲೇಜು ವಿಭಾಗ ದ ಫುಟ್ಬಾಲ್ ಪಂದ್ಯಾಟದ ಉದ್ಘಾಟನೆ ಆ. ೨೦ರಂದು ನಡೆಯಿತು.
ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ದೀಪ ಬೆಳಗಿಸಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.















ವೇದಿಕೆಯಲ್ಲಿ ನಗರ ಪಂಚಾಯತ್ ಸದಸ್ಯರಾದ ಎಂ ವೆಂಕಪ್ಪ ಗೌಡ, ಕೆ.ಪಿ.ಸ್ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ, ಚಿದಾನಂದ ಕುದ್ಪಾಜೆ,ಮಾಜಿ ಕಾರ್ಯಧ್ಯಕ್ಷ ಪ್ರವೀಣ್ ನಾಯಕ್,ಮಾಜಿ ಅಧ್ಯಕ್ಷ ಆರ್.ಕೆ. ಮೊಹಮ್ಮದ್, ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಪರಮೇಶ್ವರಿ, ಉಪ ಪ್ರಾಂಶುಪಾಲೆ ಶ್ರೀಮತಿ ಜ್ಯೋತಿ ಲಕ್ಷ್ಮಿ ಮತ್ತು ಇತರ ಕೆ.ಪಿ.ಎಸ್. ನ ಸಮಿತಿ ಸದಸ್ಯರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಾಂಶುಪಾಲ ರಾದ ಶ್ರೀಮತಿ ಪರಮೇಶ್ವರಿ ಸ್ವಾಗತಿಸಿ, ಉಪನ್ಯಾಸಕ, ರಾಜೇಶ್ ವಂದಿಸಿದರು.
ಪಂದ್ಯಾಟದಲ್ಲಿ ತಾಲೂಕಿನ ಹಲವಾರು ಶಾಲಾ ವಿದ್ಯಾರ್ಥಿಗಳ ತಂಡಗಳು ಭಾಗವಹಿಸಿದ್ದವು.










