ಜಟ್ಟಿಪಳ್ಳ : ಗಣೇಶ ಪ್ರತಿಷ್ಠಾಪನೆ

0

ಸುಳ್ಯ ಜಟ್ಟಿಪಳ್ಳದ ಶ್ರೀರಾಮ ಭಜನಾ ಸೇವಾ ಸಂಘದ ಆಶ್ರಯದಲ್ಲಿ 32 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಇಂದು ಬೆಳಿಗ್ಗೆ ಆರಂಭಗೊಂಡಿತು.

ಪುರೋಹಿತ ಸುದರ್ಶನ ಭಟ್ ಉಜಿರೆಯವರ ಪೌರೋಹಿತ್ಯದಲ್ಲಿ ಶ್ರೀರಾಮ ಭಜನಾ ಸಂಘದ ಪದಾಧಿಕಾರಿಗಳು ಹಾಗೂ ಊರ ಭಕ್ತಾದಿಗಳ ಉಪಸ್ಥಿತಿಯಲ್ಲಿ ಪ್ರತಿಷ್ಠಾಪನಾ ಕಾರ್ಯ ನಡೆಯಿತು.