ಸುಳ್ಯ 57 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಉದ್ಘಾಟನೆ

0

ಬಾಲಗಂಗಾಧರನಾಥ ತಿಲಕ ರವರ ಪ್ರೇರಣೆಯಂತೆ ಗಣೇಶೋತ್ಸವದ ಆಚರಣೆಯ ಮುಖಾಂತರ ಹಿಂದೂ ಸಮಾಜದ ಸಂಘಟನೆಯಾಗಿದೆ – ಡಾ. ಕೆ. ವಿ. ಚಿದಾನಂದ

ನಮ್ಮ ಸುತ್ತ ಮುತ್ತ ಎಲ್ಲೆಲ್ಲಿಯೂ ಇರುವ ಗಣಪತಿಯನ್ನು ಅಂತ ರಾಳದ ಮನಸ್ಸಿನಿಂದ ಧ್ಯಾನಿಸಿದರೆ ಫಲಪ್ರದ ಲಭಿಸುವುದು- ಡಾ. ಹರಪ್ರಸಾದ್ ತುದಿಯಡ್ಕ

ಸುಳ್ಯ ಸಾರ್ವಜನಿಕ ದೇವತಾರಧಾನ ಸಮಿತಿ, ಶ್ರೀ ಸಿದ್ದಿವಿನಾಯಕ ಸೇವಾ ಸಮಿತಿಯ ಆಶ್ರಯದಲ್ಲಿ ಶ್ರೀ ಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ ಆ. 27 ರಿಂದ 31ರ ತನಕ ಸಮಾಜ ಸಂಘಟನೆ ಮತ್ತು ಧರ್ಮ ಜಾಗೃತಿಗಾಗಿ ನಡೆಯಲಿರುವ 57 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಉದ್ಘಾಟನಾ ಸಮಾರಂಭವು ಆ. 27 ರಂದು ನಡೆಯಿತು.


ಸುಳ್ಯಅಕಾಡೆಮಿ ಆಪ್ ಲಿಬರಲ್ ಎಜ್ಯೂಕೇಷನ್ ಇದರ ಅಧ್ಯಕ್ಷ ಡಾ. ಕೆ. ವಿ. ಚಿದಾನಂದ ರವರು ದೀಪ ಪ್ರಜ್ವಲಿಸಿ ಶುಭ ಹಾರೈಸಿದರು. ಶ್ರೀ ಸಿದ್ದಿವಿನಾಯಕ ಸೇವಾ ಸಮಿತಿ ಅಧ್ಯಕ್ಷ ಪಿ. ಕೆ. ಉಮೇಶ ರವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಡಾ. ಹರಪ್ರಸಾದ್ ತುದಿಯಡ್ಕ, ಸಾರ್ವಜನಿಕ ದೇವತಾರಾಧನ ಸಮಿತಿ ಅಧ್ಯಕ್ಷ ದಿನೇಶ್ ಕುಮಾರ್ ಕೆ ಸಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನ್ಯಾಯವಾದಿ ಶ್ರೀಮತಿ ಸುಮಾ ರವರು ಪ್ರಾರ್ಥಿಸಿದರು. ದಿನೇಶ್ ಕುಮಾರ್ ಕೆ. ಸಿ. ಸ್ವಾಗತಿಸಿದರು. ಪಿ. ಕೆ. ಉಮೇಶ ರವರು ವಂದಿಸಿದರು. ಶಶಿಧರ ಎಂ. ಜೆ. ಕಾರ್ಯಕ್ರಮ
ನಿರೂಪಿಸಿದರು. ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಸಹಕರಿಸಿದರು. ಬಳಿಕ ಮಕ್ಕಳ ಭಜನಾ ಸ್ಪರ್ಧೆಯು ಆರಂಭ ಗೊಂಡಿತು.