














ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬಾಲಂಬಿ – ಚೆಂಬು ಇಲ್ಲಿ ಆ.೨೭ ರಂದು ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಚೆಂಬು ಶಾಖೆಯ ಆವರಣದಲ್ಲಿ ದಿನೇಶ್ ಸಣ್ಣಮನೆಯ ಅಧ್ಯಕ್ಷತೆಯಲ್ಲಿ ೪ನೇ ವರ್ಷದ ಗಣೇಶ ಚತುರ್ಥಿ ಆಚರಣೆ ಪ್ರಯುಕ್ತ ಗಣಪತಿ ಹೋಮ, ವಿಗ್ರಹ ಪ್ರತಿಷ್ಠೆ, ಭಜನಾ ಕಾರ್ಯಕ್ರಮ, ಯಕ್ಷಗಾನ ತಾಳಮದ್ದಳೆ, ಶರಸೇತು ಬಂಧನ ಮತ್ತು ಮಹಾಪೂಜೆ, ಅನ್ನಸಂತರ್ಪಣೆ, ಸಭಾ ಕಾರ್ಯಕ್ರಮ, ಬಹುಮಾನ ವಿತರಣೆ ನಡೆಯಿತು.

ಈ ವೇಳೆ ಗಣೇಶೋತ್ಸವ ಚೌತಿಯ ಪದಾಧಿಕಾರಿಗಳು ಹಾಗೂ ಊರ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ವಿಜೃಂಭಣೆಯ ಶೋಭಾಯಾತ್ರೆ ನಡೆದು ಕೂಡಡ್ಕ ಸೇತುವೆಯ ಪಯಸ್ವಿನಿ ನದಿಯಲ್ಲಿ ಗಣೇಶನ ಜಲಸ್ತಂಭನವಾಯಿತು.










