ವಿಶೇಷ ಚೆಂಡೆ ವಾದನ, ಭಜನೆ, ಕೀರ್ತನೆ, ನೃತ್ಯ, ಯಕ್ಷಗಾನ ಸೇವೆಯೊಂದಿಗೆ
ರಾಯರ ಪಲ್ಲಕಿ ಉತ್ಸವ ಹಾಗೂ ತೊಟ್ಟಿಲು ಸೇವೆ
ಸುಳ್ಯದ ಶ್ರೀ ಗುರುರಾಘವೇಂದ್ರ ಮಠದಲ್ಲಿ ಶ್ರೀ ಗುರು ರಾಯರ 354ನೇ ಆರಾಧನಾ ಮಹೋತ್ಸವವು ವಿಜ್ರಂಭಣೆಯಿಂದ
ಆ.11 ರಂದು ಜರುಗಿತು.
















ಬೆಳಗ್ಗೆ ಪುರೋಹಿತರಾದ
ಶ್ರೀಹರಿ ಎಳಚಿತ್ತಾಯ ಮತ್ತು ಅರ್ಚಕರಾದ ರವಿ
ನಾವಡ ನೇತೃತ್ವದಲ್ಲಿ ಮಹಾಗಣಪತಿ ಹವನ, ಪವಮಾನ ಹೋಮ, ಪವಮಾನ ಅಭಿಷೇಕ, ಬ್ರಾಹ್ಮಣ ರಾಧನೆಯು ನಡೆಯಿತು. ಮದ್ಯಾಹ್ನ ರಾಯರಿಗೆಮಹಾಪೂಜೆ ಯಾಗಿ ಪ್ರಸಾದ ವಿತರಣೆ ಮತ್ತು ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು.
ಬೆಳಗ್ಗೆ ಶ್ರೀ ಚೆನ್ನಕೇಶವ ಭಜನಾ ಸಂಘದ ಮಹಿಳಾ ಸದಸ್ಯರಿಂದ ಭಜನೆ ಹಾಗೂ
ರಾಜೇಶ್ ರೈ ಮೇನಾಲ ಇವರಿಂದ ಭಕ್ತ ಸುಧಾಮ ಎಂಬ ಹರಿಕಥಾ ಕಾಲಕ್ಷೇಪ ನಡೆಯಿತು.

ಸಂಜೆ ಅಲೆಟ್ಟಿ ಶ್ರೀ ಸದಾಶಿವ ಭಜನಾಸಂಘದಸದಸ್ಯರಿಂದ ಭಜನಾ ಸೇವೆ ನಡೆಯಿತು.
ಬಳಿಕ ವಿಶೇಷವಾಗಿ ರಾಯರ ಪಲ್ಲಕ್ಕಿ ಸೇವೆ, ತೊಟ್ಟಿಲು ಸೇವೆ, ಅಷ್ಟವಧಾನ ಸೇವೆಯು ನಡೆಯಿತು.
ವಿಶೇಷವಾಗಿ ಈ ಸಂದರ್ಭದಲ್ಲಿ ಪಲ್ಲಕಿ ಸೇವೆಯು ಸ್ಯಾಕ್ಸೋ ಫೋನ್ ವಾದನ, ವೇದ ಪಾರಾಯಣ, ಕೊಳಲು ವಾದನ, ಭಜನೆ, ಚೆಂಡೆ ವಾದನದೊಂದಿಗೆ ನಡೆದು ರಾಯರಿಗೆ ತೊಟ್ಟಿಲು ಸೇವೆಯು
ಸಂಸ್ಕೃತ ಶ್ಲೋಕ ಪಠಣ,ಕಾವ್ಯ ವಾಚನ, ಶಾಸ್ತ್ರೀಯ ಸಂಗೀತ ಗಾಯನ, ಭರತ ನಾಟ್ಯ ನೃತ್ಯ ಸೇವೆ, ಚಿಕ್ಕ ಮೇಳದವರಿಂದ ಯಕ್ಷಗಾನ ಸೇವೆಯಿಂದ ನಡೆಯಿತು.
ರಾಯರ ತೊಟ್ಟಿಲು ಸೇವೆಯ ಸಮಯದಲ್ಲಿ “ತೂಗಿರೆ ರಾಯರ, ತೂಗಿರೆ ಗುರುಗಳ” ಎಂಬ ರಾಯರ ಗೀತೆಯನ್ನು ಸಾಮೂಹಿಕವಾಗಿ ಭಕ್ತರು ಹಾಡುವುದರೊಂದಿಗೆ ಭಕ್ತಿ ಪರವಶರಾದರು.

ರಾತ್ರಿ ಮಹಾಪೂಜೆಯಾಗಿ ಪ್ರಸಾದ ವಿತರಣೆ ನಡೆದು ರಾತ್ರಿ ಆಗಮಿಸಿದ
ಎಲ್ಲಾ ಭಕ್ತರಿಗೆ ಅನ್ನಸಂತರ್ಪಣೆಯಾಯಿತು. ಮಠದ ಟ್ರಸ್ಟ್ ಅಧ್ಯಕ್ಷ
ಶ್ರೀಕೃಷ್ಣ ಸೋಮಯಾಗಿ, ಸಂಚಾಲಕ ಪ್ರಕಾಶ್ ಮೂಡಿತ್ತಾಯ ಹಾಗೂ ಟ್ರಸ್ಟಿಗಳು ಸಹಕರಿಸಿದರು. ನೂರಾರು ಸಂಖ್ಯೆಯಲ್ಲಿ ರಾಯರ ಭಕ್ತರು ಪಾಲ್ಗೊಂಡ ರು.










