ಬಂದಡ್ಕ ಶ್ರೀ ಸುಬ್ರಮಣ್ಯ ದೇವಸ್ಥಾನದಲ್ಲಿ ಷಷ್ಠಿ ಉತ್ಸವ

0

ಇತಿಹಾಸ ಪ್ರಸಿದ್ದ ಗುಹೆ ಪ್ರವೇಶ-ಮೃತ್ತಿಕಾ ಪ್ರಸಾದ ವಿತರಣೆ

ಸುಳ್ಯ ಮತ್ತು ಕಾಸರಗೋಡು ತಾಲೂಕಿನ ಗಡಿ ಪ್ರದೇಶವಾದ ಬಂದಡ್ಕದ ಇತಿಹಾಸ ಪ್ರಸಿದ್ಧ ಶ್ರೀ ಸುಬ್ರಮಣ್ಯ ದೇವಸ್ಥಾನ ಬಂದಡ್ಕದಲ್ಲಿ ಷಷ್ಠಿ ಉತ್ಸವ ಇಂದು (ನ. 26) ನಡೆಯಿತು.

ಇಲ್ಲಿ ಷಷ್ಠಿ ದಿನದಂದು ನಡೆಯುವ ಗುಹಾ ಪ್ರವೇಶ ವಿಶೇಷವಾಗಿದ್ದು ಸುಮಾರು 75ಕ್ಕೂ ಹೆಚ್ಚು ಮಂದಿ ಭಕ್ತರು ವೃತಧಾರಿಗಳಾಗಿ ಗುಹಾ ಪ್ರವೇಶ ಮಾಡಿ ಮೃತ್ತಿಕಾ ಪ್ರಸಾದ ತಂದು ಭಕ್ತರಿಗೆ ಹಂಚಿದರು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಮೊಕ್ತೇಸರ ಬಿ. ಸದಾನಂದ ರೈ ಹಾಗೂ ಆಡಳಿತ ಮಂಡಳಿ ಅಧ್ಯಕ್ಷರಾದ ಶುಭಾಶ್ಚಂದ್ರ ರೈ ತೋಟ, ಪ್ರಧಾನ ಕಾರ್ಯದರ್ಶಿ ಭೋಜಪ್ಪ ಗೌಡ ಪಾಲಾರು ಮೂಲೆ, ಖಜಾಂಜಿ ನಿತ್ಯಾನಂದ ಸೇರಿದಂತೆ ಉಪಾಧ್ಯಕ್ಷರುಗಳು, ಸದಸ್ಯರು ಹಾಗೂ ನೂರಾರು ಭಕ್ತರು ಶ್ರೀ ದೇವರ ಪ್ರಾಸದ ಸ್ವೀಕರಿಸಿದರು.