
ದೇವಚಳ್ಳ ಗ್ರಾಮದ ಮುಂಡೋಡಿ ಪದ್ಮನಾಭ ಗೌಡ ಎಂಬವರು ಅಲ್ಪಕಾಲದ ಅಸೌಖ್ಯದಿಂದ ನ.25 ರಂದು ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು.















ಅವರು ಮುಂಡೋಡಿ ತರವಾಡು ಮನೆತನದ ದೈವ ಪರಿಚಾರಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಮೃತರು ಪತ್ನಿ ಪ್ರೇಮ, ಪುತ್ರ ಪ್ರಸನ್ನ ಮುಂಡೋಡಿ, ಪುತ್ರಿಯರಾದ ಶ್ರೀಮತಿ ಪ್ರತಿಭಾ, ಪ್ರತೀಕ್ಷಾ ಮುಂಡೋಡಿ, ಸೊಸೆ ಶ್ರಿಮತಿ ಭವ್ಯಶ್ರಿ ಪ್ರಸನ್ನ, ಅಳಿಯ ರವಿಕಿರಣ್, ಮೊಮ್ಮಕ್ಕಳಾದ ವಿದ್ವತ್, ಸಾದ್ವಿ, ಸಹೋದರರಾದ ನಿವೃತ ಪಿಡಿಒ ದೇವರಾಜ್ , ವಿಶ್ವನಾಥ ಮುಂಡೋಡಿ ಹರಿಹರ ಹಾಗೂ
ಬಂಧುಮಿತ್ರರು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.










