ಕೆ.ವಿ.ಜಿ ಆಯುರ್ವೇದ ಕಾಲೇಜಿನಲ್ಲಿ ನ. 23 ರಂದು ಜರುಗಿದ ಕಾಲೇಜಿನ ವಾರ್ಷಿಕೋತ್ಸವದಂದು ಕೆ.ವಿ.ಜಿ ಆಯುರ್ವೇದ ಔಷಧ ತಯಾರಿಕಾ ಘಟಕ ಹಾಗೂ ಸಂಶೋಧನಾ ಕೇಂದ್ರದಲ್ಲಿ ತಯಾರಿಸಲಾದ ನೂತನ ಶಾಸ್ತ್ರೀಯ ಆಯುರ್ವೇದ ಔಷಧ ಉತ್ಪನ್ನಗಳಾದ ತಕ್ರಾರಿಷ್ಟ, ತಾಂಬೂಲಾಸವ ಮತ್ತು ಆಜಮೋದ ಅರ್ಕಗಳನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಅಧ್ಯಕ್ಷರಾದ ಡಾ. ಕೆ. ವಿ. ಚಿದಾನಂದ, ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಡಾ. ಸಂಕನಗೌಡ ಪಾಟೀಲ್, ಸೆನೆಟ್ ಮೆಂಬರ್, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು, ಕರ್ನಾಟಕ ಸರ್ಕಾರದ ಕನಿಷ್ಟ ವೇತನ ಸಲಹಾ ಮಂಡಳಿಯ ಅಧ್ಯಕ್ಷರಾದ ಟಿ ಎಂ ಶಹೀದ್, ಗೌರವ ಅತಿಥಿಗಳಾದ ಆರ್ಕಿಟೆಕ್ಟ್ ಅಕ್ಷಯ್ ಕೆ.ಸಿ., ಪ್ರಧಾನ ಕಾರ್ಯದರ್ಶಿ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್, ಶ್ರೀ ಹೇಮನಾಥ ಕೆ.ವಿ., ಕಾರ್ಯದರ್ಶಿ,ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್, ಸುಳ್ಯ ಬಿಡುಗಡೆಗೊಳಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಕೆ.ವಿ.ಜಿ. ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ. ವಿ, ಕೆ.ವಿ.ಜಿ. ಆಯುರ್ವೇದ ಔಷಧ ತಯಾರಿಕಾ ಘಟಕ ಹಾಗೂ ಸಂಶೋಧನಾ ಕೇಂದ್ರದ ಮುಖ್ಯ ಕಾರ್ಯ ನಿರ್ವಾಹಕರಾದ ಡಾ.ಪುರುಷೋತ್ತಮ ಕೆ.ಜಿ., ವಿದ್ಯಾರ್ಥಿ ಕ್ಷೇಮ ಅಧಿಕಾರಿ ಡಾ. ವಿನಯ್ ಶಂಕರ್ ಭಾರದ್ವಾಜ್ , ರಸಶಾಸ್ತ್ರ ಮತ್ತು ಭೈಷಜ್ಯ ಕಲ್ಪನಾ ವಿಭಾಗದ ಪ್ರಾಧ್ಯಾಪಕರಾದ ಡಾ. ಹರ್ಷಿತಾ. ಎಂ., ಡಾ. ಪವನ ಕೆ. ಬಿ , ಡಾ. ಗೋಪಾಲಕೃಷ್ಣ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.















ತಕ್ರಾರಿಷ್ಟ ವೈಶಿಷ್ಟತೆ
ಅಜೀರ್ಣ, ಅಗ್ನಿಮಾಂದ್ಯ, ಉದರ ಶೂಲ ಮೂಲವ್ಯಾಧಿ, ಗುದ ರೋಗ, ಕೋಷ್ಟ ಸಂಶೋಧನಕ್ಕಾಗಿ ಹಾಗೂ ಜಠರ ಸಂಬಂಧಿತ ಕಾಯಿಲೆಗಳಿಗೆ ಜೀರಿಗೆ, ಕೊತ್ತಂಬರಿ, ಹಿಪ್ಪಲಿ, ಚಿತ್ರಕ, ಓಮ ಮುಂತಾದ ನೈಸರ್ಗಿಕ ದ್ರವ್ಯಗಳನ್ನು ಒಳಗೂಡಿ ಹಸುವಿನ ಮಜ್ಜಿಗೆಯಲ್ಲಿ ತಯಾರಿಸಿದ ಒಂದು ಶ್ರೇಷ್ಠ ಆಯುರ್ವೇದ ಔಷಧಿ.
ತಾಂಬೂಲಾಸವ ವೈಶಿಷ್ಟತೆ
ಅಗ್ನಿ ಮಾಂದ್ಯ, ಕಫ ದೋಷ ಸಂಬಂಧಿತ ರೋಗಗಳು ಮೂಲವ್ಯಾಧಿ ಹಾಗೂ ಅಶ್ಮರಿ (ಮೂತ್ರಪಿಂಡದಲ್ಲಿ ಉಂಟಾಗುವ ಕಲ್ಲು) ಯಲ್ಲಿ ಸೂಚಿಸಿರುವ ಶಾಸ್ತ್ರೀಯ ಆಯುರ್ವೇದ ಔಷಧ.
ವೀಳ್ಯದೆಲೆ, ತ್ರಿಫಲ, ಏಳಕ್ಕಿ, ಲವಂಗ ಜಾಯಿಕಾಯಿ, ಖದಿರ ಹಾಗೂ ಧಾತಕಿ ಪುಷ್ಪವನ್ನು ಉಪಯೋಗಿಸಿ ಸಂಧಾನ ವಿಧಿಯಲ್ಲಿ ತಯಾರಿಸಿದ ಈ ಉತ್ಕೃಷ್ಟ ಔಷಧವು ಅಗ್ನಿಯನ್ನು ಉತ್ತೇಜಿಸುತ್ತದೆ, ಆಹಾರ ಜೀರ್ಣಕ್ರಿಯೆಯನ್ನು ಬಲಪಡಿಸುತ್ತದೆ, ಹಾಗೂ ಉತ್ತಮ ರಸಾಯನವಾಗಿರುತ್ತದೆ.
ಅಜಮೋದ ಅರ್ಕ ( ಓಮ ಸತ್ವ ) ವೈಶಿಷ್ಟತೆ
ಓಮದಿಂದ ತಯಾರಿಸಿದ ಈ ಔಷಧವು ಜಠರಾಗ್ನಿಯನ್ನು ಉತ್ತೇಜಿಸಿ, ಹೊಟ್ಟೆ ಉಬ್ಬರ, ಜಠರ ಸಂಬಂಧಿತ ಸಮಸ್ಯೆಗಳಲ್ಲಿ ವೇಗವಾದ ಆರೈಕೆಯನ್ನು ನೀಡುತ್ತದೆ. ಅಗ್ನಿಮಾಂದತೆ, ಅಜೀರ್ಣ, ವಾತಕಫದ ರೋಗಗಳಲ್ಲಿ ಹಾಗೂ ಮೂತ್ರ ಕೋಶದ ಸಮಸ್ಯೆಗಳಿಗೆ ಪರಿಣಾಮಕಾರಿ ಆಯುರ್ವೇದ ಔಷಧಿ.










