
ಕರ್ನಾಟಕ ಸರಕಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತಾಲೂಕು ಪಂಚಾಯತ್ ಸುಳ್ಯ, ಗ್ರಾಮ ಪಂಚಾಯತ್ ದೇವಚಳ್ಳ, ಯುವಜನ ಸಂಯುಕ್ತ ಮಂಡಳಿ ಸುಳ್ಯ, ದೇವಚಳ್ಳ ಯುವಕ ಮಂಡಲ ಕಂದ್ರಪ್ಪಾಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಸುಳ್ಯ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ೨೦೨೫ ೨೬ ಆಗಸ್ಟ್ ೩೧ ರಂದು ದ.ಕ. ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ, ಕ್ರೀಡಾಂಗಣ ಕಂದ್ರಪ್ಪಾಡಿಯಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಜಿಲ್ಲೆ ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರ ಇದರ ಅಧ್ಯಕ್ಷರಾದ ಭರತ್ ಮುಂಡೋಡಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಭಾಧ್ಯಕ್ಷತೆಯನ್ನು ಶಾಸಕಿ ಕು. ಭಾಗೀರಥಿ ಮುರುಳ್ಯರವರು ವಹಿಸಿದ್ದರು. ಅತಿಥಿಗಳು ಪಾರಿವಾಳವನ್ನು ಹಾರಿ ಬಿಡುವುದರ ಮುಖಾಂತರ ಕ್ರೀಡಾಕೂಟಕ್ಕೆ ವಿದ್ಯುಕ್ತ ಚಾಲನೆ ನೀಡಿದರು.








ಮುಖ್ಯ ಅತಿಥಿಗಳಾಗಿ ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ಮಾಜಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ದೇವಚಳ್ಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ದಿವಾಕರ ಮಂಡೋಡಿ, ಗ್ರಾಮ ಪಂಚಾಯತ್ ಸದಸ್ಯ ಭವಾನಿಶಂಕರ ಮುಂಡೋಡಿ, ಮಡಪ್ಪಾಡಿ ಪಿಎಸಿ ಬ್ಯಾಂಕ್ ಅಧ್ಯಕ್ಷ ವಿನಯ ಮುಳುಗಾಡು, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಜಯರಾಮ ಗೌಡ ಕಡ್ಲಾರು, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವಾಣಿ ಕೆ.ಎಸ್. ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಶ್ರೀಮತಿ ವೀಣಾ ಕೆ., ಯುವಜನ ಸಂಯುಕ್ತ ಮಂಡಳಿಯ ಉಸ್ತುವಾರಿ ನಿರ್ದೇಶಕ ವಿಜೇಶ್ ಹಿರಿಯಡ್ಕ, ದೇವಚಳ್ಳ ಯುವಕ ಮಂಡಲದ ಅಧ್ಯಕ್ಷ ಉದಯಕುಮಾರ್ ಮುಂಡೋಡಿ, ಯುವ ಸಬಲೀಕರಣ ಕ್ರೀಡಾ ಇಲಾಖೆಯ ನೋಡಲ್ ಅಧಿಕಾರಿ ದೇವರಾಜ್ ಮುತ್ಲಾಜೆ ಉಪಸಿತರಿದ್ದರು.

ಈ ಸಂದರ್ಭದಲ್ಲಿ ಇತ್ತೀಚೆಗಷ್ಟೇ ನಿವೃತ್ತಿ ಹೊಂದಿದ ಅಂಚೆ ಇಲಾಖೆಯ ಸಿಬ್ಬಂದಿ ಪುರುಷೋತ್ತಮ ಪರಮಲೆ ಇವರನ್ನು ಸನ್ಮಾನಿಸಲಾಯಿತು. ಕ್ರೀಡಾಕೂಟದಲ್ಲಿ ಸಾವಿರಕ್ಕಿಂತಲೂ ಅಧಿಕ ಮಂದಿ ಭಾಗವಹಿಸಿದ್ದರು. ಕಾರ್ಯಕ್ರಮದ ಯಶಸ್ವಿಗೆ ದೇವಚಳ್ಳ ಯುವಕ ಮಂಡಲ ಕಂದ್ರಪ್ಪಾಡಿ ಹಾಗೂ ಯುವಜನ ಸಂಯುಕ್ತ ಮಂಡಳಿಯ ನಿರ್ದೇಶಕರು ಊರಿನವರು ಸಹಕರಿಸಿದರು.










