ಕುಲಾಲ ಸುಧಾರಕ ಸೇವಾ ಸಂಘ ಸುಳ್ಯ ಬೆಳ್ಳಾರೆ ವತಿಯಿಂದ ತಾಲೂಕು ಮಟ್ಟದ ಕೆಸರುಗದ್ದೆ ಕ್ರೀಡಾಕೂಟ

0

ಗದ್ದೆಯಲ್ಲಿ ಮಿಂದೆದ್ದು ಖುಷಿಪಟ್ಟ ನೂರಾರು ಜನ ಕ್ರೀಡಾಪಟುಗಳು

ಕುಲಾಲ ಸುಧಾರಕ ಸೇವಾ ಸಂಘ ಸುಳ್ಯ ಬೆಳ್ಳಾರೆ ವತಿಯಿಂದ ತಾಲೂಕು ಮಟ್ಟದ ಸ್ವಜಾತಿ ಬಾಂಧವರ ಕೆಸರುಗದ್ದೆ ಕ್ರೀಡಾಕೂಟವು ಆ.31 ರಂದು ಬೆಳ್ಳಾರೆ ಗ್ರಾಮದ ನೆಟ್ಟಾರಿನಲ್ಲಿ ನಡೆಯಿತು.


ನೆಟ್ಟಾರು ದಿ.ಕೃಷ್ಣಪ್ಪ ಮೂಲ್ಯ ಕೋಡಿಮನೆಯವರ ಗದ್ದೆಯಲ್ಲಿ ಬೆಳಿಗ್ಗೆ ಕ್ರೀಡಾಕೂಟ ಪ್ರಾರಂಭವಾಯಿತು.
ಶ್ರೀಮತಿ ಸೀತಮ್ಮಕೋಡಿಮನೆ ನೆಟ್ಟಾರು ಇವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು.


ಕುಲಾಲ ಸಂಘದ ಅಧ್ಯಕ್ಷ ನಾಗೇಶ್ ಕುಲಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭಹಾರೈಸಿ ಮಾತನಾಡಿದರು.
ವೇದಿಕೆಯಲ್ಲಿ ತೀರ್ಪುಗಾರರಾದ
ಕಾವು ಬುಶ್ರಾ ಆಂಗ್ಲ ಮಾದ್ಯಮ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ ಚಾವಡಿಬಾಗಿಲು ,ಉಜಿರೆ ಎಸ್.ಡಿ.ಎಂ.ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕಿ ಕು.ವೀಕ್ಷಿತಾ ,ಸಂಘದ ಉಪಾಧ್ಯಕ್ಷೆ ಶ್ರೀಮತಿ ಸುಮಿತ್ರ ಮಣಿಮಜಲು ವೇದಿಕೆಯಲ್ಲಿದ್ದರು‌.


ವಿಶ್ವನಾಥ ಕುಲಾಲ್ ಪೆಲತ್ತಮೂಲೆ ಸಹಕರಿಸಿದರು.
ಗುರುವಪ್ಪ ಚಾವಡಿಬಾಗಿಲು ಪ್ರಾರ್ಥಿಸಿ,ಸಂಘದ ಕಾರ್ಯದರ್ಶಿ ಧನಂಜಯ ಕುಲಾಲ್ ಕಲ್ಮಡ್ಕ ವಂದಿಸಿದರು.
ವಿವಿಧ ಸ್ಪರ್ಧೆಗಳು ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆಯಲಿದೆ.