ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫಾ ರವರ 1500 ನೇ ಜನ್ಮ ದಿನಾಚರಣೆಯು ಗೂನಡ್ಕ ಬದ್ರಿಯಾ ಜುಮ್ಮಾ ಮಸೀದಿ ಯಲ್ಲಿ ನಡೆಯಿತು ಸ್ಥಳೀಯ ಖತೀಬರಾದ ಅಬೂಬಕ್ಕರ್ ಸಿದ್ದೀಖ್ ಸಖಾಪಿ ಅಲ್ ಹರ್ಷದಿ ಯವರ ಪ್ರಾರ್ಥನೆ ಯೊಂದಿಗೆ
ಜಮಾಅತ್ ಅದ್ಯಕ್ಷರಾದ ಮುಹಮ್ಮದ್ ಕುಞಿ ಗೂನಡ್ಕ ರವರು ಧ್ವಜಾರೋಹಣ ನೆರವೇರಿಸಿದರು.
ಗೂನಡ್ಕ ಹಯಾತುಲ್ ಇಸ್ಲಾಂ ಮದ್ರಸಾ ವಿದ್ಯಾರ್ಥಿಗಳ ಮನಮೋಹಕವಾದ ದಪ್ ಪ್ರದರ್ಶನದೊಂದಿಗೆ ಮೀಲಾದ್ ಕಾಲ್ನಡಿಗೆ ಜಾಥಾ ಗೂನಡ್ಕ ಮುಖ್ಯ ಪೇಟಯಲ್ಲಿ ನಡೆಯಿತು.









ಜುಮಾ ನಮಾಝ್ ಬಳಿಕ ಮೌಲಿದ್ ಪಾರಾಯಣ ನಡೆಯಿತು
ಕಾರ್ಯಕ್ರಮದಲ್ಲಿ ಹಿಮಾಯತುಲ್ ಇಸ್ಲಾಂ ಜಮಾಅತ್ ಕಮಿಟಿ ಕಾರ್ಯಕಾರಿ ಸಮಿತಿ ಸದಸ್ಯರು ,ಜಮಾಅತಿನ ಎಲ್ಲಾ ಹಿರಿಯ ಕಿರಿಯ ಸದಸ್ಯರು ವಿವಿದ ಸಂಘಟನೆಗಳ, ಅಂಗಸಂಸ್ಥೆಗಳ ಸದಸ್ಯರುಗಳು ಪಾಲ್ಗೊಂಡಿದ್ದರು.

ಮೀಲಾದ್ ಕಾರ್ಯಕ್ರಮಗಳ ಮುಂದುವರಿದ ಭಾಗವಾದ ಮದ್ರಸಾ ವಿದ್ಯಾರ್ಥಿಗಳ
ಜಸ್ನೇ ಮೀಲಾದ್ ಎಂಬ
ಸಾಂಸ್ಕೃತಿಕ ಕಾರ್ಯಕ್ರಮಗಳು ಸೆ. 6 ಶನಿವಾರ 2 ಗಂಟೆಗೆ ಗೂನಡ್ಕ ಬದ್ರಿಯಾ ಜುಮ್ಮಾ ಮಸೀದಿ ವಠಾರದಲ್ಲಿ ನಡೆಯಲಿದೆ








