ನಿರ್ವಹಣೆಯಿಲ್ಲದೆ ಸೊರಗಿದ ಕೋನಡ್ಕಪದವು ಸ್ಮಶಾನದಲ್ಲಿ ಬೊಳುಬೈಲು ನವಚೇತನ ಯು.ಮಂ.ದಿಂದ‌ ಶ್ರಮದಾನ

0

ಗ್ರಾ.ಪಂ. ಅಧ್ಯಕ್ಷರು, ಸ್ಥಳೀಯರ ಸಹಕಾರ

ಶವ ಸುಡಲು ಸ್ಮಶಾನ ಸಿದ್ಧಗೊಳಿಸಿದ ಯುವಕ ಮಂಡಲ ಕಾರ್ಯಕ್ಕೆ ಶ್ಲಾಘನೆ

ಕಳೆದ ಎರಡು ವರ್ಷಗಳಿಂದ ನಿರ್ವಹಣೆಯಿಲ್ಲದೆ ಸೊರಗಿ‌ ಹೋಗಿದ್ದ ಜಾಲ್ಸೂರು‌ ಗ್ರಾಮದ ಕೋನಡ್ಕಪದವು ಸ್ಮಶಾನದಲ್ಲಿ ಬೊಳುಬೈಲಿನ ನವಚೇತನ ಯುವಕ ಮಂಡಲ ಪದಾದಿಕಾರಿಗಳು ಗ್ರಾಮ ಪಂಚಾಯತ್ ಜಾಲ್ಸೂರು ಇದರ ಸಹಕಾರದೊಂದಿಗೆ ಸೆ.7ರಂದು ಸ್ವಚ್ಚತಾ ಅಭಿಯಾನ ನಡೆಸಿ ಶವ ಸುಡಲು ಸ್ಮಶಾನವನ್ನು ಸಿದ್ಧಗೊಳಿಸಿದ್ದಾರೆ. ಯುವಕ ಮಂಡಲದ‌ ಮಾದರಿ ನಡೆಗೆ ಊರವರಿಂದ ಶ್ಲಾಘನೆ ವ್ಯಕ್ತವಾಗಿದೆ.

ಕೋನಡ್ಕಪದವಿನಲ್ಲಿ
2020ರಲ್ಲಿ  ಗ್ರಾಮ ಪಂಚಾಯತ್ ನ ನರೇಗಾ ಯೋಜನೆಯಿಂದ ಮುಕ್ತಿ ಧಾಮವು ನಿರ್ಮಾಣಗೊಂಡಿತ್ತು. ಹಲವಾರು ಶವಗಳಿಗೆ ಮುಕ್ತಿಯನ್ನು ನೀಡಿದ್ದ ಧಾಮವು  ನಂತರದ ದಿನಗಳಲ್ಲಿ  ನಿರ್ವಹಣೆಯಿಲ್ಲದೆ ಪಾಳು ಬಿದ್ದ ಪರಿಣಾಮವಾಗಿ ಇಲ್ಲಿ ಶವಗಳನ್ನು ಸುಡುತ್ತಿರಲಿಲ್ಲ. ಶವಗಳನ್ನು ಸುಳ್ಯದ ಕೊಡಿಯಾಲಬೈಲು ಸ್ಮಶಾನಕ್ಕೆ ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದನ್ನು ಮನಗಂಡ ನವಚೇತನ ಯುವಕಮಂಡಲ ಪಂಚಾಯತ್ ಸಹಯೋಗದೊಂದಿಗೆ  ಸ್ವಚ್ಚತಾ ಕಾರ್ಯವನ್ನು ನಡೆಸಿದರು

ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಸಾವಿತ್ರಿ ಆಡ್ಕಾರುಬೈಲು ಯುವಕ ಮಂಡಲದ ಕಾರ್ಯದಲ್ಲಿ ಪೂರ್ಣವಾಗಿ ತೊಡಗಿಸಿಕೊಂಡರು.

ಸ್ಮಶಾನ ಸ್ವಚ್ಚತಾ ಕಾರ್ಯಕ್ಕೆ ಮೆಚ್ಚುಗೆ

ವಾರ್ಡನ ಸದಸ್ಯರಾದ ಸಂಧ್ಯಾ ವಾಗ್ಲೆ , ಅಡ್ಕಾರು ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಮಂಡಳಿಯ ಅಧ್ಯಕ್ಷ ಹರಿಪ್ರಕಾಶ್ ಆಡ್ಕಾರು. ಪಿಡಬ್ಲ್ಯೂಡಿ ಗುತ್ತಿಗೆದಾರ ಉದಯ್ ವಾಗ್ಲೆ ಆಡ್ಕಾರು, ಗೋಪಾಲ ಬೈಲು ಸ್ಥಳಕ್ಕೆ ಆಗಮಿಸಿ ಯುವಕ ಮಂಡಲದ‌ಕಾರ್ಯವನ್ನು ಶ್ಲಾಘಿಸಿದರು.

ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಗುತ್ತಿಗೆದಾರ ಉದಯ ವಾಗ್ಲೆ ಅವರು ನೀಡಿದರು. ಅಡುಗೆಯಲ್ಲಿ  ಕಾಟೂರು ಶಿವರಾಮ ಗೌಡ ದಂಪತಿಗಳು ಸಹಕರಿಸಿದರು.


ಸ್ವಚ್ಚತಾ ಕಾರ್ಯದಲ್ಲಿ
ಸಂಸ್ಥೆಯ ಪೂರ್ವಧ್ಯಕ್ಷರಾದ ದಯಾನಂದ ಪಿಲಿಕೊಡಿ, ಜಯಪ್ರಕಾಶ್ ಬೈತಡ್ಕ, ನಿತಿನ್ ಆರ್ಭಡ್ಕ, ಭುವನ್ ಬೊಳುಬೈಲು, ಕಾರ್ಯಕ್ರಮ ಸಂಯೋಜಕ ಪ್ರಸಾದ್ ಕಾಟೂರು, ಕಾರ್ಯದರ್ಶಿ ಚಿತ್ತರಂಜನ್ ಕಾಟೂರು, ಸದಸ್ಯರುಗಳಾದ  ಪ್ರವೀಣ್ ಕಾಟೂರು, ರಂಜಿತ್ ಕಾಟೂರು, ದೀಪಕ್ ಕಾಯರಡ್ಕ,ಯಕ್ಷಿತ್ ಆರ್ಭಡ್ಕ,ಮೋಕ್ಷಿತ್ ಆರ್ಭಡ್ಕ, ಜಶ್ವಿತ್ ಕಾಟೂರು, ಪ್ರಜ್ವಿನ್ ಕಾಟೂರು ಉಪಸ್ಥಿತರಿದ್ದರು.