ಜಾಲ್ಸೂರು ಗ್ರಾಮದ ಅಡ್ಕಾರು ವನಸುಮ ವನವಾಸಿ ವಿದ್ಯಾರ್ಥಿ ನಿಲಯದಲ್ಲಿ ಅಂಜಲಿ ಮೌಂಟೆಸರಿ ಸ್ಕೂಲ್ ಸುಳ್ಯ ಚಾರಿಟೇಬಲ್ ಟ್ರಸ್ಟ್ ಸಂಚಾಲಕರಾದ ಶ್ರೀಮತಿ ಗೀತಾಂಜಲಿ ಟಿ. ಜಿ ರವರು ಸೆ. 5 ಶಿಕ್ಷಕರದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲಿಷ್ & ಕಮ್ಯುನಿಕೇಷನ್ ಸ್ಕಿಲ್ ಕ್ಲಾಸಿಗೆ ದೀಪ ಪ್ರಜ್ವಲನೆಯ ಮೂಲಕ ಚಾಲನೆ ನೀಡಿದರು.
ನಿಲಯದ ವಿದ್ಯಾರ್ಥಿಗಳಾದ ಅಭಿನಂದನ – ನರೇಶ ಪ್ರಾರ್ಥಿಸಿದರು.
ನಿಲಯದ ಸಹ ವ್ಯವಸ್ಥಾಪಕಿಯಾದ ಶ್ರೀ ಮತಿ ವೀರಮ್ಮ ಸ್ವಾಗತಿಸಿದರು.








ಶ್ರೀ ಮತಿ ಗೀತಾಂಜಲಿ ದೀಪ ಬೆಳಗಿ, ಶುಭಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯಕುಮಾರ ವಿನೋಬನಗರ ವಹಿಸಿದ್ದರು.
ಬೀರು ಲಾಂಬೋರ ವಂದಿಸಿದರೆ, ಕು ರಾಮು ವರಕ್ ಕಾರ್ಯಕ್ರಮವನ್ನು ನಿರ್ವಹಿಸಿದರು.










