ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಮಿತಿ ಸುಳ್ಯ ವಲಯ ಟ್ರಸ್ಟ್ ವತಿಯಿಂದ ಶ್ರೀ ವಿಶ್ವಕರ್ಮ ಪೂಜೆ

0

ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಮಿತಿ ಸುಳ್ಯ ವಲಯ ಟ್ರಸ್ಟ್ ವತಿಯಿಂದ ಶ್ರೀ ವಿಶ್ವಕರ್ಮ ಪೂಜೆಯು ಸುಳ್ಯದ ಶಿವಕೃಪಾ ಕಲಾಮಂದಿರದಲ್ಲಿ ಸೆ. ೧೬ರಂದು ನಡೆಯಿತು.

ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ ಮತ್ತು ಶ್ರೀ ವಿಶ್ವಕರ್ಮ ಪೂಜೆ ಪ್ರಾರಂಭ, ಧಾರ್ಮಿಕ ಉಪನ್ಯಾಸ ಮತ್ತು ಸನ್ಮಾನ ಸಮಾರಂಭ ನಡೆಯಿತು.
ಸುಳ್ಯ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಮಿತಿ ಅಧ್ಯಕ್ಷ ಬಿ.ಪುರುಷೋತ್ತಮ ಆಚಾರ್ಯ ಅಜ್ಜಾವರ ಅಧ್ಯಕ್ಷತೆ ವಹಿಸಿದ್ದರು.


ಬಂಟ್ವಾಳ ದೇವಳ ಎಸ್.ವಿ.ಎಸ್. ಶಾಲೆಯ ಸಂಸ್ಕೃತ ಶಿಕ್ಷಕ ಮುರಳೀಧರ ಆಚಾರ್ಯ ದಾರ್ಮಿಕ ಉಪನ್ಯಾಸ ನೀಡಿದರು. ಮೇನಾಲ ಶ್ರೀ ಕಾಳಿಕಾ ದುರ್ಗಾಪರಮೇಶ್ವರಿ ಕ್ಷೇತ್ರದ ಪದ್ಮನಾಭ ಸ್ವಾಮಿಗಳು ಗೌರವ ಉಪಸ್ಥಿತರಿದ್ದರು.


ನಿವೃತ್ತ ಶಿಕ್ಷಕ ಗಣಪಯ್ಯ ಆಚಾರ್ಯ, ನಿವೃತ್ತ ಬ್ಯಾಂಕ್ ಉದ್ಯೋಗಿ ವಾಸುದೇವ ಆಚಾರ್ಯ ಅಜ್ಜಾವರ, ರಜತ ಶಿಲ್ಪಿ ಗಂಗಾಧರ ಆಚಾರ್ಯ ಕುಕ್ಕಂದೂರು, ದಾರು ಶಿಲ್ಪಿ ವೆಂಕಟ್ರಮಣ ಆಚಾರ್ಯ ಮರ್ಕಂಜ, ನಿವೃತ್ತ ಭೂಮಾಪನಾ ಇಲಾಖೆಯ ರಮೇಶ್ ಆಚಾರ್ಯ ಕುಂಟಿಕಾನ, ಎಸ್‌ಎಸ್‌ಎಲ್‌ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ಕು. ದೀಪಾಶ್ರೀ ಪದ್ಮನಾಭ ಆಚಾರ್ಯ ಕುಂಟಿಕಾನ, ರಾಷ್ಟ್ರೀಯ ಯೋಗಪಟು ತನುಷ್ ಕೆ.ಆರ್.ರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಪ್ರಸಾದ ಸ್ವೀಕರಿಸಿದರು.