ಟೀಮ್ ಪೋಲಾಜೆ ತಂಡ ಚಾಂಪಿಯನ್: ಕೆ.ಎಸ್.ಟಿ ಕಾಣಿಯೂರು ರನ್ನರ್ ಅಪ್
ಫ್ರೆಂಡ್ಸ್ ಸಮಹಾದಿ ಕ್ಲಬ್ ಆಶ್ರಯದಲ್ಲಿ ಆರು ಆಹ್ವಾನಿತ ತಂಡಗಳ ಲೀಗ್ ಮಾದರಿಯ ವಾಲಿಬಾಲ್ ಪಂದ್ಯಾಟವು ಸಮಹಾದಿ ಮೈದಾನದಲ್ಲಿ ಸೆ. ೨೧ ರಂದು ನಡೆಯಿತು.
ಕ್ಲಬ್ ಅಧ್ಯಕ್ಷರಾದ ರಿಯಾಝ್ ರಾಗಿಪೇಟೆ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಪಂದ್ಯಾಟವನ್ನು ಉದ್ದೇಶಿಸಿ ಮಾತನಾಡಿ, ಉದ್ಘಾಟಿಸಿ ಪಂದ್ಯಾಟಕ್ಕೆ ಚಾಲನೆ ನೀಡಿದರು.
















ಕಾರ್ಯಕ್ರಮದಲ್ಲಿ ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪಿ.ಎಂ ಅಬ್ದುಲ್ ರಹಿಮಾನ್, ತಾಲೂಕು ಪಂಚಾಯತಿ ಮಾಜಿ ಸದಸ್ಯರಾದ ಅಬ್ದುಲ್ ಗಫೂರ್, ಸಮಹಾದಿ ಅಟೋ ಚಾಲಕ ಮಾಲಕ ಸಂಘದ ಅಧ್ಯಕ್ಷ ಧರ್ಮಪಾಲ ಸಮಹಾದಿ, ಮುರುಳ್ಯ ಎಣ್ಮೂರು ಸಹಕಾರಿ ಸಂಘದ ಅಧ್ಯಕ್ಷರಾದ ವಸಂತ ನಡುಬೈಲು ಮಾತನಾಡಿ, ಕ್ರೀಡಾಪಟುಗಳಿಗೆ ಶುಭಾಶಯ ಸಲ್ಲಿಸಿದರು.




ಸಮಾರೋಪ ಸಮಾರಂಭದಲ್ಲಿ ಹಸನ್ ಕುಂಞಿ ಹಾಜಿ ಸಮಾಹಾದಿ ಅಧ್ಯಕ್ಷತೆ ವಹಿಸಿದ್ದರು. ಅಬೂಬಕ್ಕರ್ ಕೆ. ಕನಕಮಜಲು, ಸವಣೂರು ಗ್ರಾ.ಪಂ ಸದಸ್ಯ ರಫೀಕ್ ಎಂ.ಎ, ಹಾಗೂ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಅವಿನಾಶ್ ವಕೀಲರು ಬೈತಡ್ಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ವೇದಿಕೆಯಲ್ಲಿ ಮುರುಳ್ಯ ಗ್ರಾಮ ಪಂಚಾಯತಿ ಅಧ್ಯಕ್ಷೆ ವನಿತಾ ಸುವರ್ಣ, ಉದ್ಯಮಿಗಳಾದ ಉಮ್ಮರ್ ಫಾರೂಕ್ ರಾಗಿಪೇಟೆ, ಸಮೀರ್ ಎಣ್ಮೂರು, ಸಾಬುಕುಂಞಿ ಹುದೇರಿ, ಮುನೀರ್ ಕೊಡ್ಯಕಂಡ, ಶರೀಫ್ ಕೂಡುರಸ್ತೆ, ಮುರುಳ್ಯ ತುಳುನಾಡು ಕನ್ಸ್ಟ್ರಕ್ಷನ್ಸ್ನ ವಿನಯಚಂದ್ರ ಹೆದ್ದಾರಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಪಂದ್ಯಾಟದ ಮೈದಾನವನ್ನು ಹಗಲು ರಾತ್ರಿ ವಿಶ್ರಮವಿಲ್ಲದೆ ಇಬ್ರಾಹಿಂ ಖಲೀಲ್ ಶ್ರಮದಾನ ಮೂಲಕ ನೆರವೇರಿಸಿ ಕೊಟ್ಟು, ಅ ಬಳಿಕ ಜಿದ್ದಾಜಿದ್ದಿನ ಪಂದ್ಯಾಟ ನಡೆಯಿತು. ಸಾದಿಕ್ ಸಮಹಾದಿ ಮಾಲಕತ್ವದ ಟೀಮ್ ಪೋಲಾಜೆ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿತ್ತು. ಜಮಾಲ್ ಪಡ್ಪಿನ೦ಗಡಿ ರಶೀದ್ ಸಮಹಾದಿ ಮಾಲಿಕತ್ವದ ಕೆ.ಎಸ್.ಟಿ ಕಾಣಿಯೂರು ತಂಡ ರನ್ನರ್ ಪ್ರಶಸ್ತಿ ವಿಜೇತರಾದರು.











