
ಒಕ್ಕಲಿಗ ಗೌಡ ಸಮುದಾಯದ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಿ ಬೆಳೆಸುವ ನಿಟ್ಟಿನಲ್ಲಿ ಸುಳ್ಯದಲ್ಲಿ ನೂತನವಾಗಿ ಪ್ರಾರಂಭಗೊಂಡಿರುವ “ಉದ್ಯಮಿ ಒಕ್ಕಲಿಗ ಫಸ್ಟ್ ಸರ್ಕಲ್”ನ ದ್ವಿತೀಯ ಸಭೆ ಸೆ. ೨೩ರಂದು ಸಂಜೆ ಸುಳ್ಯದ ವೆಂಕಟ್ರಮಣ ಸೊಸೈಟಿಯ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉದ್ಯಮಿ, ಒಕ್ಕಲಿಗ ಫಸ್ಟ್ ಸರ್ಕಲ್‌ನ ರಾಜ್ಯದ ಮುಖ್ಯ ಮಾರ್ಗದರ್ಶಕ ಜಯರಾಮ್ ರಾಯಪುರ್ ಅವರು ಮಾತನಾಡಿ, “ಸ್ವಂತ ರಿಸ್ಕ್ ತೆಗೆದುಕೊಂಡು ಉದ್ಯಮಿ ಮಾಡುವವನೇ ಲೀಡರ್. ಇದು ಒಕ್ಕಲಿಗರಲ್ಲಿ ಇರಬೇಕು. ಈ ಭಾಗದಲ್ಲಿ ಶೇ. ೭೦ಕ್ಕಿಂತ ಹೆಚ್ಚು ಒಕ್ಕಲಿಗರಿದ್ದಾರೆ. ಇಲ್ಲಿ ನಡೆಯುವ ಉದ್ಯಮದಲ್ಲಿ ನಮ್ಮ ಪಾಲು ಎಷ್ಟಿದೆ? ನಮ್ಮಲ್ಲಿ ಉದ್ಯಮ ಸೃಷ್ಟಿ ಮಾಡುವುದು ಬಹಳ ಮುಖ್ಯ ವಿಚಾರ. ಉದ್ಯಮಶೀಲತೆ ಮುಂದೆ ಬಂದಾಗ ಆರ್ಥಿಕ, ರಾಜಕೀಯ ಶಕ್ತಿ ಬರುತ್ತದೆ. ಆದರೆ ನಮ್ಮಲ್ಲಿ ಇದರ ಕೊರತೆ ಇದೆ. ನಮ್ಮ ಮನೋಭಾವ ಬದಲಾವಣೆ ಆಗಬೇಕು. ನಮ್ಮ ಸಮಾಜದಲ್ಲಿರುವ ಉದ್ಯಮಿಗಳಿಗೆ ಗೌರವ ಕೊಡುವುದನ್ನು ನಾವು ಮೊದಲು ಕಲಿಯಬೇಕು ಎಂದರು.
ಇನ್ನೋರ್ವ ಉದ್ಯಮಿ, ಒಕ್ಕಲಿಗ ಫಸ್ಟ್ ಸರ್ಕಲ್‌ನ ರಾಜ್ಯ ಸಂಯೋಜಕ ಸಾಮ್ರಾಟ್ ಗೌಡ ಕಾನತ್ತಿಲ ಮಾತನಾಡಿ, ಫಸ್ಟ್ ಸರ್ಕಲ್‌ನ ಹಣಕಾಸು ವ್ಯವಹಾರ, ಸದಸ್ಯತ್ವದ ಬಗ್ಗೆ ಮಾಹಿತಿ ನೀಡಿದರು.















ಇನ್ನೋರ್ವ ಮುಖ್ಯ ಅತಿಥಿ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ.ಶಿವಾನಂದರು ಮಾತನಾಡಿ, ಗೌಡ ಸಮುದಾಯದವರು ಮೇಲೆ ಬಂದಾಗ ಅವರಿಗೆ ಪ್ರೋತ್ಸಾಹ, ಚಪ್ಪಾಳೆ ಜೊತೆ ಬೆಂಬಲ ದೊರೆತರೆ ಅವರು ಬೆಳೆಯುತ್ತಾರೆ. ನಮ್ಮಲ್ಲಿ ಆತ್ಮವಿಶ್ವಾಸ ಇರಬೇಕು. ಸುಳ್ಯದಲ್ಲಿ ಹಲವು ಉದ್ಯಮಿಗಳಿದ್ದಾರೆ. ಸಮಾಜದಲ್ಲಿ ಅವರು ಮೇಲೆ ಬಂದಾಗ ಅವರನ್ನು ಗುರುತಿಸುವ ಕಾರ್ಯ ಆಗಬೇಕು. ಸುದ್ದಿ ಅರಿವು ಕೇಂದ್ರದ ಮೂಲಕ ಸರ್ವಿಸ್ ಜೊತೆಗೆ ಮಾರ್ಕೆಟ್ ವ್ಯವಸ್ಥೆ ನಾವು ಮಾಡುತ್ತೇವೆ. ಇದೀಗ ಡಿಜಿಟಲ್ ಮಾರ್ಕೆಟ್‌ನತ್ತ ಕೂಡಾ ಹೆಜ್ಜೆ ಇಟ್ಟಿದ್ದೇವೆ ಎಂದರು.
ವೇದಿಕೆಯಲ್ಲಿದ್ದ ಉದ್ಯಮಿ ಒಕ್ಕಲಿಗ ಫಸ್ಟ್ ಸರ್ಕಲ್‌ನ ದ.ಕ.ಜಿಲ್ಲಾಧ್ಯಕ್ಷ ಪದ್ಮ ಕೋಲ್ಚಾರ್ ಮಾತನಾಡಿ, ಸುಳ್ಯ ಭಾಗದಲ್ಲಿ ಕೃಷಿ ಹೆಚ್ಚು. ಆದರೆ ಮುಂದಿನ ಯುವ ಜನಾಂಗಕ್ಕೆ ಕೃಷಿ ವಲಯವನ್ನು ಉದ್ಯಮದ ಕಡೆ ಕೊಂಡೊಯ್ಯುವ ಕುರಿತು ಹೆಚ್ಚಿನ ಮಾಹಿತಿ ನೀಡಬೇಕಾಗಿದೆ ಎಂದರು. ಫಸ್ಟ್ ಸರ್ಕಲ್ ಮೂಲಕ ಉದ್ಯಮಗಳಿಗೆ ಪ್ರೋತ್ಸಾಹ ನೀಡುವ ಕುರಿತು ಚರ್ಚಿಸಿ ಎಲ್ಲರಿಗೂ ವ್ಯಾಪಾರ ಬರುವಂತೆ ಪ್ರಯತ್ನ ಮಾಡೋಣ ಎಂದು ಸಭೆಯಲ್ಲಿ ಸಲಹೆ ನೀಡಲಾಯಿತು.
ಇದೇ ಸಂದರ್ಭ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ.ಶಿವಾನಂದರನ್ನು ಫಸ್ಟ್ ಸರ್ಕಲ್‌ನ ಜಿಲ್ಲಾ ಮಾರ್ಗದರ್ಶಕರನ್ನಾಗಿ ಜಯರಾಮ್ ರಾಯಪುರ್ ಅವರು ಘೋಷಣೆ ಮಾಡಿದರು.
ಸಭೆಯಲ್ಲಿ ಸುಳ್ಯ ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ. ಎಸ್. ಗಂಗಾಧರ್, ದ.ಕ. ಜಿಲ್ಲಾ ಜೇನು ಸೊಸೈಟಿ ಅಧ್ಯಕ್ಷ ಚಂದ್ರ ಕೋಲ್ಚಾರ್, ಲೇಖಕ ಎ. ಕೆ. ಹಿಮಕರ, ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ, ಸುಳ್ಯ ಲಯನ್ಸ್ ಕ್ಲಬ್ ಕಾರ್ಯದರ್ಶಿ ಮಲ್ಲಿಕಾರ್ಜುನ್ ಪ್ರಸಾದ್, ಸಾಮಾಜಿಕ ಕಾರ್ಯಕರ್ತ ಸುಪ್ರಿತ್ ಮೊಂಟಡ್ಕ, ಗೌಡ ಸಂಘದ ಪದಾಧಿಕಾರಿ ಬೆಳ್ಯಪ್ಪ ಗೌಡ ಬಳ್ಳಡ್ಕ, ಗೇರುಬೀಜ ಉದ್ಯಮಿ ಬಿ.ಎಲ್. ಶಿವರಾಮ ಗೌಡ ಬಳ್ಳಡ್ಕ, ಎಸ್.ಎಂ. ನವೀನ್‌ಚಂದ್ರ ಸಂಪಾಜೆ, ಶ್ರೀಮತಿ ಧನಲಕ್ಷ್ಮಿ ನವೀನ್‌ಚಂದ್ರ ಸಂಪಾಜೆ, ಶ್ರೀಮತಿ ಧರ್ಮ ಕಿಶೋರ್ ಸಂಪಾಜೆ, ಅರೆಭಾಷೆ ಅಕಾಡೆಮಿ ಸದಸ್ಯ ಡಾ. ಎನ್.ಎ. ಜ್ಞಾನೇಶ್, ಲೀಫ್ ಕಪ್ ಉದ್ಯಮಿ ತೇಜಪ್ರಕಾಶ್ ಬುಡ್ಲೆಗುತ್ತು, ಕಲ್ಪ ಫುಡ್ ಯುನಿಟ್ ಮಾಲಕ ಮನೋಜ್ ನರಿಯೂರು, ಅರಂತೋಡು ತೊಡಿಕಾನ ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಸಿ.ಎ. ಬ್ಯಾಂಕ್ ಅಧ್ಯಕ್ಷ ವಿಕ್ರಂ ಅಡ್ಪಂಗಾಯ, ಕೃಷಿಕ ಸುರೇಶ್ ಅಮೈ, ಉದ್ಯಮಿ ದೇವಿಪ್ರಸಾದ್ ಚಿಕ್ಮುಳಿ, ಅರೆಭಾಷೆ ಅಕಾಡೆಮಿ ಸದಸ್ಯೆ ಹಾಗೂ ಉದ್ಯಮಿ ಲತಾ ಪ್ರಸಾದ್ ಕುದ್ಪಾಜೆ, ಜಾಲ್ಸೂರಿನ ಮೀರಾ ಎಂಟರ್‌ಪ್ರೈಸಸ್ ಮಾಲಕ ಪ್ರಶಾಂತ್ ಮೊಂಟಡ್ಕ, ಕೃಷಿಕ ಶಿವಕುಮಾರ ಕೊಯಿಂಗೋಡಿ, ಕಲ್ಲುಗುಂಡಿ ಸ್ಪಾಟ್ ಕಂಪ್ಯೂಟರ್ ಮಾಲಕ ಕಿಶೋರ್ ಕುಮಾರ್ ಕಲ್ಲುಗುಂಡಿ, ವೆಂಕಟ್ರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಟಿ. ವಿಶ್ವನಾಥ್. ಸ್ವರ್ಣ ಜ್ಯುವೆಲ್ಸ್‌ನ ಪಾಲುದಾರ ಪ್ರವೀಣ್ ಬಿ. ಗೌಡ, ದುರ್ಗಾ ಟೆಕ್ಸ್‌ಟೈಲ್ ಮಾಲಕಿ ಶ್ರೀಮತಿ ಶೃತಿ, ಬೆಳ್ತಂಗಡಿ ಸುದ್ದಿ ಬಿಡುಗಡೆ ಸಿಇಒ ಸಿಂಚನ ಊರುಬೈಲ್, ಸುದ್ದಿ ಅರಿವು ಕೇಂದ್ರದ ಅಶೀಶ್, ಸುದ್ದಿ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಮ್ಮನೆ, ಸುದ್ದಿ ಪ್ರಸರಣಾಧಿಕಾರಿ ಗಣೇಶ್ ಕುಕ್ಕುತಡಿ, ಸುದ್ದಿ ವರದಿಗಾರ ಶಿವರಾಮ ಕಜೆಮೂಲೆ, ಸುದ್ದಿ ಸಿಬ್ಬಂದಿಗಳಾದ ಜಯಶ್ರೀ ಕೊಯಿಂಗೋಡಿ, ಪ್ರಜ್ಞಾ ಎಸ್ ನಾರಾಯಣ್, ಪೂಜಾಶ್ರೀ ವಿತೇಶ್ ಉಪಸ್ಥಿತರಿದ್ದರು.
ಒಕ್ಕಲಿಗ ಫಸ್ಟ್ ಸರ್ಕಲ್‌ನ ಚೇರ್‌ಮೆನ್ ದಿನೇಶ್ ಮಡಪ್ಪಾಡಿ ಕಾರ್ಯಕ್ರಮ ನಿರ್ವಹಿಸಿ, ಸ್ವಾಗತಿಸಿದರು. ಸಂತೋಷ್ ಕುತ್ತಮೊಟ್ಟೆ ವಂದಿಸಿದರು. ಕೋರ್ ಟೆಕ್ನಾಲಜಿ ಮಾಲಕ ಹಾಗೂ ಉದ್ಯಮಿ ಒಕ್ಕಲಿಗ ಫಸ್ಟ್ ಸರ್ಕಲ್‌ನ ಜಿಲ್ಲಾ ಸಂಯೋಜಕ ಅನೂಪ್ ಕೊಳೆಂಜಿರೋಡಿ ಸಹಕರಿಸಿದರು.










