ಅರಂಬೂರಿನಲ್ಲಿ ಶ್ರೀಕೃಷ್ಣ ರಸಪಾಕ ಗ್ರ್ಯಾಂಡ್ ಲೋಕಾರ್ಪಣೆ
ಎಡನೀರು ಸ್ವಾಮೀಜಿ, ತಂತ್ರಿಗಳು ಸಹಿತ ಗಣ್ಯರ ಆಗಮನ : ಶುಭಹಾರೈಕೆ
ಸುಳ್ಯದ ಅರಂಬೂರಿನಲ್ಲಿ ನಾರಾಯಣ ಕೇಕಡ್ಕ ಹಾಗೂ ಕೃಷ್ಣ ಕಾಮತ್ ರವರ ಪಾಲುದಾರಿಕೆಯಲ್ಲಿ ಶ್ರೀಕೃಷ್ಣ ರಸಪಾಕ ಗ್ರ್ಯಾಂಡ್ ಸಸ್ಯಹಾರಿ ಹೋಟೆಲ್ ಸೆ.24ರಂದು ಲೋಕಾರ್ಪಣೆಗೊಂಡಿತು.
ಕಾಸರಗೋಡು ಎಡನೀರು ಮಠದ ಸಚ್ಚಿಸಾನಂದ ಭಾರತೀ ಸ್ವಾಮೀಜಿಗಳು ದೀಪ ಬೆಳಗಿ ಹೋಟೆಲ್ ಉದ್ಘಾಟಿಸಿದರೆ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ರಿಬ್ಬನ್ ಕತ್ತರಿಸಿ ಹೋಟೆಲ್ ಲೋಕಾರ್ಪಣೆ ಮಾಡಿದರು.















ಹವಾನಿಯಂತ್ರಿತ ಕೊಠಡಿಯನ್ನು ಶಾಸಕಿ ಕು.ಭಾಗೀರಥಿ ಮುರುಳ್ಯ ಉದ್ಘಾಟಿಸಿದರು.
ಕುಂಟಾರು ರವೀಶ ತಂತ್ರಿ ಹಾಗೂ ದೇಲಂಪಾಡಿ ಗಣೇಶ್ ತಂತ್ರಿಯವರು ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಎಸ್.ಅಂಗಾರ, ಕಾಸರಗೋಡು ಕಾಮತ್ ಮೆಡಿಕಲ್ ಸೆಂಟರ್ ನ ಡಾ. ಅನಂತ್ ಕಾಮತ್, ಪದ್ಮಶ್ರೀ ಪುರಸ್ಕೃತ ರಾದ ಡಾ.ಗಿರೀಶ್ ಭಾರದ್ವಾಜ್, ಆರ್.ಎಸ್.ಎಸ್. ಕರ್ನಾಟಕ ದಕ್ಷಿಣ ಪ್ರಾಂತ ಸಹ ಸೇವಾ ಪ್ರಮುಖ್ ನ.ಸೀತಾರಾಮ, ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಡಾ. ಹರಪ್ರಸಾದ್ ತುದಿಯಡ್ಕ, ಜಿ.ಪಂ. ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಆಲೆಟ್ಟಿ ಗ್ರಾ.ಪಂ. ಅಧ್ಯಕ್ಷೆ ವೀಣಾ ವಸಂತ್, ಸುಳ್ಯ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ.ಎಂ. ಮುಸ್ತಫ, ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ.ವೆಂಕಪ್ಪ ಗೌಡ, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎನ್.ಎ.ರಾಮಚಂದ್ರ, ಲಯನ್ಸ್ ಮಾಜಿ ಗವರ್ನರ್ ಎಂ.ಬಿ.ಸದಾಶಿವ, ನ.ಪಂ. ಮಾಜಿ ಅಧ್ಯಕ್ಷ ಎಸ್.ಸಂಶುದ್ದೀನ್, ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ಡಾ.ರಾಮ ಮೋಹನ್, ಆಲೆಟ್ಟಿ ಗ್ರಾ.ಪಂ. ಸದಸ್ಯರಾದ ಸುದೇಶ್ ಅರಂಬೂರು, ಪುಷ್ಪಾವತಿ ಕುಡೆಕಲ್ಲು, ಅನಿತಾ ಇಡ್ಯಡ್ಕ ಭಾಗವಹಿಸಿದ್ದರು.
ಆಗಮಿಸಿದ ಎಲ್ಲರನ್ನು ಶ್ರೀಮತಿ ಸುಪ್ರೀತ ಕೇಕಡ್ಕ ಮತ್ತು ನಾರಾಯಣ ಕೇಕಡ್ಕ ಮತ್ತು ಮನೆಯವರು ಹಾಗೂ ಶ್ರೀಮತಿ ನಳಿನಿ ಕಾಮತ್ ಮತ್ತು ಕೃಷ್ಣ ಕಾಮತ್ ಮತ್ತು ಮನೆಯವರು ಬರಮಾಡಿಕೊಂಡು ಸ್ವಾಗತಿಸಿದರು.
ಬೂಡು ರಾಧಾಕೃಷ್ಣ ರೈಯವರು ಕಾರ್ಯಕ್ರಮ ನಿರೂಪಿಸಿದರು. ಹೋಟೆಲ್ ಪಾಲುದಾರರಾದ ನಾರಾಯಣ ಕೇಕಡ್ಕ ವಂದಿಸಿದರು.










