ದೇವಚಳ್ಳ ಗ್ರಾಮದ ಕೋಡಿಮಜಲ್ ಎಂಬಲ್ಲಿ ನೂತನವಾಗಿ ನಿರ್ಮಿಸಿದ ಜಾಕೆ ಕಾಂಪ್ಲೆಕ್ಸ್ ಲೋಕಾರ್ಪಣೆ ಕಾರ್ಯಕ್ರಮದ ಪ್ರಯುಕ್ತ ಸಭಾ ಕಾರ್ಯಕ್ರಮ ಸೆ. 20ರಂದು ನಡೆಯಿತು.
ಸಭಾಧ್ಯಕ್ಷತೆಯನ್ನು ಜಾಕೆ ಮನೆತನದ ಹಿರಿಯರಾದ ಜಾಕೆ ಮಾಧವ ಗೌಡ ವಹಿಸಿ ಶುಭ ಹಾರೈಸಿದರು. ಕಟ್ಟಡ ಮಾಲಕರಾದ ನವೀನ್ ಜಾಕೆ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು .
ವಿಶ್ರಾಂತ ಪ್ರಾಧ್ಯಾಪಕರಾದ ಡಾ| ವಿಶ್ವನಾಥ ಬದಿಕಾನರವರು ಕುತ್ತಿ ಪೂಜೆ ಮಹತ್ವದ ಬಗ್ಗೆ ವಿವರವಾಗಿ ತಿಳಿಸಿದರು.















ಅಥಿಗಳಾಗಿ ತಳೂರು ಚಂದ್ರಶೇಖರ್ ಭಟ್, ಇನ್ನೋರ್ವ ಮುಖ್ಯ ಅತಿಥಿ ನವೀನ್ ಜಾಕೆಯವರ ಬಂಧು
ಬೆಂಗಳೂರಿನ ಪೋಲಿಸ್ ವರಿಷ್ಠಾಧಿಕಾರಿ ಶ್ರೀನಿವಾಸ ಗೌಡರವರು ಶುಭ ಹಾರೈಸಿದರು.
ವೇದಿಕೆಯಲ್ಲಿ ನವೀನ್ ಜಾಕೆ ಯ ವರ ಪತ್ನಿ ಶ್ರೀಮತಿ ವಾಣಿ ಮಕ್ಕಳಾದ ಧೀಮಂತ್ ಮತ್ತು ಶಮಂತ್, ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನವೀನ್ ಜಾಕೆ ಯವರ ಸಹೋದರ ಶಶಿಧರ್ ಜಾಕೆ ಶ್ರೀಮತಿ ಕುಸುಮಾತಿ ಶಶಿಧರ್, ಕುಟುಂಬದ ಹಿರಿಯರಾದ, ಶ್ರೀಮತಿ ಇಂದುಮತಿ ವಾಸುದೇವ ಜಾಕೆ ಶ್ರೀಮತಿ ಲೀಲಾವತಿ ಮಾದವ ಗೌಡ ಜಾಕೆ, ಸದಾನಂದ ಜಾಕೆ ಮತ್ತು ಶ್ರೀಮತಿ ರೇಣುಕಾ ಸದಾನಂದ ಜಾಕೆ, ಸಂತೋಷ್ ಜಾಕೆ, ಹಿರಿಯ ಬಂಧು ಶ್ರೀಮತಿ ದೇವಕಿ ಮುತ್ತಪ್ಪ ಗೌಡ ಬೈಲಾಡಿ, ಶ್ರೀಮತಿ ಶಕೀಲಾ ಶ್ರೀನಿವಾಸ್ ಗೌಡ, ದಾಮೋದರ ಗೌಡ ಬೆಳ್ತಂಗಡಿ, ಶ್ರೀಮತಿ ವಾರಿಜಾ ದಾಮೋದರ ಗೌಡ, ನಿವೃತ್ತ ಉಪ ಸಂರಕ್ಷಣಾಧಿಕಾರಿಗಳಾದ ಪದ್ಮನಾಭ ಗೌಡ, ಶ್ರೀಮತಿ ಮೋಹಿನಿ ಪದ್ಮನಾಭ ಗೌಡ, ಹಾಗೂ ಊರ ಗಣ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಟ್ಟಡದ ಇಂಜಿನಿಯರ್ ಆದ ಮೋಹಿತ್ ಹರ್ಲಡ್ಕ, ಹಾಗೂ ಮುಖ್ಯ ಅತಿಥಿ ಡಾ| ವಿಶ್ವನಾಥ ಬದಿ ಕಾನ ವರನ್ನು ಸನ್ಮಾನಿಸಲಾಯಿತು.
ವಂದನಾರ್ಪನೆ ಯನ್ನು ಧೀಮಂತ್ ಜಾಕೆ ನಡೆಸಿದರು.
ಕಾರ್ಯಕ್ರಮ ನಿರೂಪಣೆಯನ್ನು ಗೋಪಿನಾಥ್ ಮೆತ್ತಡ್ಕ ಜಯಂತ್ತ ತಳೂರು, ಜೀವನ್ ತಳೂರು
ನಿರ್ವಹಿಸಿದರು.










