ಬೆಳ್ಳಾರೆಯ ಡಾ.ಕೆ. ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ಘಟಕದ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಸುಳ್ಯ ತಾಲೂಕಿನ ಎಣ್ಮೂರು ಸರಕಾರಿ ಪ್ರೌಢಶಾಲೆಯ ಶಿಕ್ಷಕರು ಹಾಗೂ ಜೆ ಸಿ ಐ ಇಂಡಿಯಾದ ವಲಯ ತರಬೇತುದಾರರೂ ಆದ ಶ್ರೀ ಲಿಂಗಪ್ಪ ಬೆಳ್ಳಾರೆ ಇವರು “ಯುವಜನತೆ ಮತ್ತು ನಾಯಕತ್ವ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.








ಪ್ರಸ್ತುತ ದಿನಮಾನದ ನಾಯಕರುಗಳಲ್ಲಿ ಸತ್ಯ, ನಿಷ್ಠೆ ಮತ್ತು ಪ್ರಾಮಾಣಿಕತೆ ಮರೆಯಾಗುತ್ತಿದ್ದು ಯುವ ಜನತೆಯು ತಮ್ಮ ನಾಯಕತ್ವದಲ್ಲಿ ಇಂತಹ ಮೌಲ್ಯಗಳನ್ನು ಮರೆಯಬಾರದು ಮತ್ತು ಆ ಮೂಲಕ ಸದೃಢ ಭಾರತ ನಿರ್ಮಾಣಕ್ಕೆ ಕೊಡುಗೆ ನೀಡಬೇಕೆಂದು ಹೇಳಿದರು.

ಕಾಲೇಜಿನ ಐಕ್ಯುಎಸಿ ಸಂಚಾಲಕರಾದ ಡಾ. ಸುಪ್ರಿಯ ಪಿ.ಆರ್ ಮಾತನಾಡಿ ಯುವಜನತೆಯಲ್ಲಿ ಆತ್ಮವಿಶ್ವಾಸ ಮತ್ತು ನಾಯಕತ್ವ ಗುಣ ಬೆಳೆಸುವಲ್ಲಿ ಎನ್ಎಸ್ಎಸ್ ಅತ್ಯಂತ ಮಹತ್ವ ಪೂರ್ಣ ಪಾತ್ರ ವಹಿಸುತ್ತದೆ ಎಂದು ಹೇಳಿದರು. ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಬಾಲಸುಬ್ರಹ್ಮಣ್ಯ ಪಿ.ಎಸ್ ಮಾತನಾಡಿ ಇಂದಿನ ಯುವ ಜನಾಂಗದಲ್ಲಿ ನಾಯಕತ್ವದ ಗುಣವು ಕಡಿಮೆಯಾಗುತ್ತಿದ್ದು ಎನ್ಎಸ್ಎಸ್ ನ ಕಾರ್ಯಕ್ರಮಗಳ ಮೂಲಕ ಆ ಗುಣಗಳನ್ನು ಮರು ಸ್ಥಾಪಿಸಬಹುದಾಗಿದೆ ಎಂದು ಹೇಳಿದರು. ಪ್ರಸ್ತಾವಿಕವಾಗಿ ಮಾತನಾಡಿದ ಎನ್ಎಸ್ಎಸ್ ಘಟಕದ ಕಾರ್ಯಕ್ರಮ ಅಧಿಕಾರಿಯಾದ ಶ್ರೀ ಗಿರೀಶ ಸಿಆರ್ ಎನ್ಎಸ್ಎಸ್ ನ ಧ್ಯೇಯೋದ್ದೇಶಗಳ ಬಗ್ಗೆ ತಿಳಿಸಿದರು.
ಎನ್ಎಸ್ಎಸ್ ಘಟಕದ ಸ್ವಯಂಸೇವಕ ವಿದ್ಯಾರ್ಥಿಗಳಾದ ಕು. ನಂದಿತಾ, ಕು. ಅಕ್ಷತಾ ಮತ್ತು ಕು. ಕಾವ್ಯ ಪ್ರಾರ್ಥನೆ ನೆರವೇರಿಸಿದರು. ಕು. ರಮ್ಯಶ್ರೀ ಸ್ವಾಗತಿಸಿ, ಕು. ಅಶ್ವಿನಿ ವಂದಿಸಿ, ಕು. ಸಿಂಚನ ಕಾರ್ಯಕ್ರಮ ನಿರೂಪಣೆ ಮಾಡಿದರು.










