ದೇವ : ವೃದ್ಧ ಆತ್ಮಹತ್ಯೆ

0

ವೃದ್ಧರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ದೇವಚಳ್ಳ ಗ್ರಾಮದ ದೇವ ಎಂಬಲ್ಲಿಂದ ವರದಿಯಾಗಿದೆ.

ದೇವ ಕಾಲೊನಿ ನಿವಾಸಿ ಬಾಬು ಆಚಳ್ಳಿ ಎಂಬವರೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಅವರಿಗೆ 65 ವರ್ಷ ಪ್ರಾಯವಾಗಿತ್ತು.

ಬಾಬುರವರಿಗೆ ಇಬ್ಬರು ಪತ್ನಿಯರಿದ್ದು, ಒಬ್ಬರು ಗುತ್ತಿಗಾರಿನಲ್ಲಿ ಒಬ್ಬ ಪುತ್ರ ಮತ್ತು ಇಬ್ಬರು ಪುತ್ರಿಯರೊಂದಿಗೆ ವಾಸವಾಗಿದ್ದರೆ. ಇನ್ನೊಬ್ಬರು ದೇವ ಕಾಲೊನಿಯಲ್ಲಿದ್ದು ಬಾಬುರವರು ಅವರೊಂದಿಗೆ ಇದ್ದರು. ಕಳೆದ ಐದಾರು ವರ್ಷದಿಂದ ಅನಾರೋಗ್ಯದಿಂದಿದ್ದರೆನ್ನಲಾಗಿದೆ. ಇಂದು ಹಳೆಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡರೆನ್ನಲಾಗಿದೆ.
ಘಟನೆಗೆ ಕಾರಣ ತಿಳಿದುಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿದು ಬಂದಿದೆ.