ಲೋಕಾಯುಕ್ತ ನ್ಯಾಯಾಲಯದ ಆದೇಶ

0

ಅರಣ್ಯ ಅತಿಕ್ರಮಿತ ಕೃಷಿಯನ್ನು ಕಿತ್ತೆಸೆಯುತ್ತಿರುವ ಅರಣ್ಯ ಇಲಾಖೆ – ಸಾರ್ವಜನಿಕರ ಆಕ್ರೋಶ

ಯೇನೆಕಲ್ ಪುರ್ಲುಪ್ಪಾಡಿ ನಿವಾಸಿ ಕುಮಾರ ಎಂಬವರು ನೆಟ್ಟ ಅಡಿಕೆ ಗಿಡಗಳನ್ನು ಅರಣ್ಯ ಭೂಮಿಯಲ್ಲಿ ಅತಿಕ್ರಮಿಸಿ ಮಾಡಿದ್ದಾರೆಂಬ ಕಾರಣಕ್ಕಾಗಿ ಅರಣ್ಯ ಇಲಾಖೆ ಕಿತ್ತೆಸೆಯುವ ಕಾರ್ಯಾಚರಣೆ ಮಾಡುತ್ತಿದೆ ಎಂದು ತಿಳಿದು ಬಂದಿದೆ. ಈ ಕಾರ್ಯಾಚರಣೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.


ಲೋಕಾಯುಕ್ತ ನ್ಯಾಯಾಲಯದಲ್ಲಿ ಈ ಪ್ರಕರಣ ವಿಚಾರಣೆಯಾಗಿ ಅತಿಕ್ರಮಣ ತೆರವುಗೊಳಿಸುವಂತೆ ಆದೇಶವಾಗಿತ್ತೆಂದೂ ನಿಗದಿತ ಸಮಯದೊಳಗೆ ತೆರವುಗೊಳಿಸದೇ ಇದ್ದುದಕ್ಕಾಗಿ ಪಂಜ ವಲಯದ ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳು ಇಂದು ಬೆಳಿಗ್ಗೆ ಸ್ಥಳಕ್ಕೆ ಹೋಗಿ ಕುಮಾರರವರು ಮಾಡಿದ್ದ ಕೃಷಿಯನ್ನು ಕಿತ್ತು ನಾಶಪಡಿಸುತ್ತಿದ್ದಾರೆಂದು ತಿಳಿದು ಬಂದಿದೆ.


ಸುಮಾರು ೨೦೦ ಎಕ್ರೆ ಪ್ರದೇಶ ಈ ಸರ್ವೆ ನಂ. ವ್ಯಾಪ್ತಿಗೆ ಬರುತ್ತಿದೆ ಎನ್ನಲಾಗಿದ್ದು, ಇಲ್ಲಿ ಹಲವಾರು ಮಂದಿ ಕೃಷಿಕರು ಮನೆಕಟ್ಟಿ ಕೃಷಿ ಮಾಡಿ ಬದುಕಿತ್ತಾರೆ. ಕುಮಾರರವರು ಕೃಷಿ ಮಾಡಿರುವ ಜಾಗ ಅವರ ತಾಯಿ ರುಕ್ಮಿಣಿಯವರ ಹೆಸರಿನಲ್ಲಿ ೨೦೧೯ರಲ್ಲಿ ಅಕ್ರಮ ಸಕ್ರಮದಲ್ಲಿ ರೆಕಾರ್ಡ್ ಆಗಿತ್ತೆಂದೂ, ಈಗ ಲೋಕಾಯುಕ್ತ ನ್ಯಾಯಾಲಯದ ಆದೇಶದ ಹೆಸರಿನಲ್ಲಿ ಒಬ್ಬರನ್ನು ಮಾತ್ರ ಒಕ್ಕಲೆಬ್ಬಿಸುವ ಕೆಲಸ ಸರಿಯಲ್ಲವೆಂದು ಊರವರು ಸ್ಥಳದಲ್ಲಿ ಸೇರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆಂದು ತಿಳಿದು ಬಂದಿದೆ.
ಯೇನೆಕಲ್ಲು ಗ್ರಾಮದ ಪಂಜ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿದ್ದು, ಅಧಿಕಾರಿಗಳು ಸಂಪರ್ಕಕ್ಕೆ ಲಭ್ಯರಾಗುತ್ತಿಲ್ಲ.