ಸುಳ್ಯದಲ್ಲಿ ಇಂದು ಸಂಜೆ ಸುರಿದ ಭಾರೀ ಮಳೆಗೆ ಸುಳ್ಯದ ಶ್ರೀರಾಮ ಪೇಟೆಯಲ್ಲಿ ಒಳಚರಂಡಿ ನೀರು ರಸ್ತೆಯಲ್ಲಿ ಹರಿಯಿತು.
ಏಕಾ ಏಕಿ ಕೆಲಹೊತ್ತು ಸುರಿದ ಮಳೆಗೆ ಚರಂಡಿಯಲ್ಲಿ ಮಳೆ ನೀರು ಹರಿಯದೆ ಶ್ರೀರಾಮಪೇಟೆಯಲ್ಲಿ ಚರಂಡಿಯ ನೀರು ಹೊಳೆಯಂತೆ ರಸ್ತೆಯಲ್ಲಿ ಹರಿಯಿತು.
ಇದರಿಂದ ವಾಹನ ಸವಾರರಿಗೆ ಪಾದಚಾರಿಗಳಿಗೆ ಕೆಲಹೊತ್ತು ಸಮಸ್ಯೆಯಾಯಿತು.


























