ನಿಂತಿಕಲ್ಲು ಡಿ ಸಿ ಸಿ ಬ್ಯಾಂಕ್ ನಲ್ಲಿ ಗ್ರಾಹಕರಿಗೆ ಆರ್ಥಿಕ ಅರಿವು ಜಾಗೃತಿ ಕಾರ್ಯಕ್ರಮ

0

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಸಂಘ ಮಂಗಳೂರು ನಿಂತಿಕಲ್ಲು ಶಾಖೆ ಮತ್ತು ನಬಾರ್ಡ್ ಸಹಯೋಗದೊಂದಿಗೆ ಸೆಪ್ಟೆಂಬರ್ ೨೬ ರಂದು ನಿಂತಿಕಲ್ಲು ಶಾಖೆ ಯಲ್ಲಿ ಗ್ರಾಹಕರಿಗೆ ಆರ್ಥಿಕ ಅರಿವು ಜಾಗೃತಿ ಕಾರ್ಯಕ್ರಮ ನಡೆಯಿತು.


ನಿವೃತ್ತ ಯೋಧ ಪಿಲಂಕುಜೆ ಸುಂದರ ಗೌಡ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆ ಮಾಡಿ ಶುಭ ಹಾರೈಸಿದರು. ನಿವೃತ್ತ ಶಾಖಾ ನೀರಿಕ್ಷಕರಾದ ನಟರಾಜ್‌ರವರು ಬ್ಯಾಂನಲ್ಲಿ ಸವಲತ್ತು ಸೌಲಭ್ಯಗಳ ಬಗ್ಗೆ ಮಾಹಿತಿ ಕಾರ್ಯಗಾರ ನಡೆಸಿಕೊಟ್ಟರು.
ಮುರುಳ್ಯ ಎಣ್ಮೂರು ಸೊಸೈಟಿ ಕಾರ್ಯ ನಿರ್ವಹಣಾಧಿಕಾರಿ ಚಿದಾನಂದ ರೈ, ಕಲ್ಮಡ್ಕ ಸೊಸೈಟಿ ಕಾರ್ಯ ನಿರ್ವಹಣಾಧಿಕಾರಿ ಪ್ರಶಾಂತ್ , ನಿಂತಿಕಲ್ಲು ಶಾಖಾ ಮೆನೇಜರ್ ಶ್ರೀಮತಿ ಸುಧಾ ಹಿಮಕರ ವೇದಿಕೆಯಲ್ಲಿದ್ದರು.


ನಿಂತಿಕಲ್ಲು ವೆಂಕಟ್ರಮಣ ಸೊಸೈಟಿ ಮೆನೇಜರ್ ಚರಣ್ ಡಿ. ಎ., ಮುರುಳ್ಯ ಹಾಲು ಸೊಸೈಟಿ ಅಧ್ಯಕ್ಷ ಸೀತಾರಾಮ ಗೌಡ ಎಮ್. ಬಿ., ಪಡ್ಪಿಂನಂಗಡಿ ಶಾಖಾ ವ್ಯವಸ್ಥಾಪಕರಾದ ಶ್ರೀಮತಿ ಸುಮಿತ್ರಾ ಉಪಸ್ಥಿತರಿದ್ದರು. ಶಾಖಾ ಅಸಿಸ್ಟೆಂಟ್ ಮೆನೇಜರ್ ಶ್ರೀಮತಿ ಶಶಿಕಲಾ ಕೆ.ಎಸ್., ಸಿಬ್ಬಂದಿ ವಿನಯ ಚಂದ್ರ ಸಹಕರಿಸಿದರು. ಶ್ರೀಮತಿ ಲಕ್ಷೀ ಪ್ರಾರ್ಥನೆ ಮಾಡಿದರು, ಪ್ರದೀಪ್ ರೈ ಎಣ್ಮೂರು ಕಾರ್ಯಕ್ರಮ ನಿರೂಪಣೆ ಮಾಡಿದರು. ಸಿಬ್ಬಂದಿ ರಕ್ಷಿತ್ ವಂದಿಸಿದರು. ವರದಿ : ಸಂಕಪ್ಪ ಸಾಲಿಯಾನ್ ಅಲೆಕ್ಕಾಡಿ