
ಸುಳ್ಯ- ಕಾಸರಗೋಡು ಹೆದ್ದಾರಿಯ ಪರಪ್ಪೆ ಎಂಬಲ್ಲಿ ಟಿಂಬರ್ ಲಾರಿಯೊಂದು ಬಾಕಿಯಾಗಿ ಸಂಚಾರ ಅಸ್ತವ್ಯಸ್ತಗೊಂಡಿರುವುದಾಗಿ ತಿಳಿದುಬಂದಿದೆ.




ಪರಪ್ಪೆ ಭಾಗದಲ್ಲಿ ರಸ್ತೆ ಕಾಮಗಾರಿಯೂ ನಡೆಯುತ್ತಿದ್ದು ಇಂದು ಬೆಳಿಗ್ಗೆ ಆ ರಸ್ತೆ ಯಾಗಿ ಬಂದ ಟಿಂಬರ್ ಲಾರಿಯೊಂದು ಹೂತುಹೋಗಿ ರಸ್ತೆ ಬ್ಲಾಕ್ ಆಗಿದೆ. ಪರಿಣಾಮವಾಗಿ ಸಂಚಾರ ತೊಂದರೆಯಾಗಿದ್ದು ವಾಹನಗಳು ಎರಡೂ ಕಡೆ ಸಾಲುಗಟ್ಟಿ ನಿಂತಿವೆ. ವಾಹನಗಳು ಮಾರ್ಗ ಬದಲಾವಣೆ ಮಾಡಿ ಸಂಚರಿಸುತ್ತಿವೆ. ಬಸ್ಸುಗಳು ಸುಳ್ಯ ಮಂಡೆಕೋಲು ಅಡೂರು ಮಾರ್ಗವಾಗಿ ಕಾಸರಗೋಡಿಗೆ ಸಂಚರಿಸುತ್ತಿರುವುದಾಗಿ ತಿಳಿದುಬಂದಿದೆ

















