35 ವರ್ಷಗಳಿಂದ ಪೊಲೀಸರಿಂದ ತಲೆಮರಿಸಿಕೊಂಡಿದ್ದ ಆರೋಪಿ : ಕೇರಳದಲ್ಲಿ ಬಂಧನ – ಸುಳ್ಯ ನ್ಯಾಯಾಲಯಕ್ಕೆ ಒಪ್ಪಿಸಿದ ಸುಳ್ಯ ಪೊಲೀಸರು

0

ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ನಾಗ ಪಟ್ಟಣ ಬಳಿ ೧೯೯೦ ರಲ್ಲಿ ಶಾಂತಪ್ಪ ಹಾಗೂ ಸುಬ್ಬಯ್ಯ ಎಂಬುವರಿಗೆ ತಲ್ವಾರಿನಿಂದ ಕಡಿದು ಗಾಯಗೊಳಿಸಿ ಪರಾರಿಯಾಗಿ ಕಳೆದ ೩೫ ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ಆರೋಪಿಯನ್ನು ಸುಳ್ಯ ಪೊಲೀಸರು ಪತ್ತೆ ಹಚ್ಚಿ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಸುಳ್ಯ ನ್ಯಾಯಾಲಯವು ಈತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಸುಳ್ಯ ವೃತ ನಿರೀಕ್ಷಕ ತಿಮ್ಮಪ್ಪ ನಾಯ್ಕ ಹಾಗೂ ಸುಳ್ಯ ಪೊಲೀಸ್ ಠಾಣಾ ಉಪ ನಿರೀಕ್ಷಕ ಸಂತೋಷ್ ಬಿ ಪಿ ರವರ ನೇತೃತ್ವದಲ್ಲಿ ಎಎಸ್‌ಐ ಉದಯ್ ಭಟ್ , ಹೆಡ್ ಕಾನ್ಸ್ಟೇಬಲ್ ರಮೇಶ್ ಲಮಾಣಿ, ಕಾನ್ಸ್ಟೇಬಲ್ ಸತೀಶ್ ಅಹೇರಿ ಆರೋಪಿಯನ್ನು ಕೇರಳದ ತ್ರಿಶೂರ್ ಜಿಲ್ಲೆಯಿಂದ ದಸ್ತಗಿರಿ ಮಾಡಿ ಸುಳ್ಯ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.