ಆಲೆಟ್ಟಿ ಗ್ರಾಮ ಪಂಚಾಯತ್ ನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹಾಗೂ ೧೫ ನೇ ಹಣಕಾಸು ಯೋಜನೆಯ ಸಾಮಾಜಿಕ ಲೆಕ್ಕಪರಿಶೋಧನೆಯ ವಿಶೇಷ ಗ್ರಾಮ ಸಭೆಯು ಶಾಲಾ ಕ್ಷೇತ್ರಶಿಕ್ಷಣಾಧಿಕಾರಿ ಶ್ರೀಮತಿ ಶೀತಲ್ ರವರ ಅಧ್ಯಕ್ಷತೆಯಲ್ಲಿ ಅ.೧೫ರಂದು ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಉದ್ಯೋಗ ಖಾತರಿ ಯೋಜನೆಯಲ್ಲಿ ಗ್ರಾಮದ ಲ್ಲಿ ಒಟ್ಟು ೮೩ ಕಾಮಗಾರಿಯಾಗಿದೆ. ಒಟ್ಟು ಕೂಲಿಮೊತ್ತರೂ.೨೯,೬೯,೦೬೧ ಹಾಗೂ ಸಾಮಗ್ರಿಗಳ ಮೊತ್ತ ೬,೧೫,೭೩೮/- ಒಟ್ಟು ಮೊತ್ತ ೩೫,೮೪,೭೯೯/- ಆಗಿರುತ್ತದೆ. ಮಾನವ ದಿನಗಳು ಒಟ್ಟು ೮೫೧೦ ಆಗಿರುತ್ತದೆ. ತೋಟಗಾರಿಕಾ ಇಲಾಖೆಗೆ ಸಂಬಂಧ ಪಟ್ಟಂತೆ ಗೇರು ಕೃಷಿ ೧ ಮಾತ್ರ, ಕೂಲಿ ಮೊತ್ತ ೧೬,೦೫೪/-, ನೆಡುತೋಪು ರಚನೆ ೧೩ ಆಗಿದ್ದು ಕೂಲಿ ಮೊತ್ತ ೧,೩೮,೫೫೩/-, ಸಾಮಗ್ರಿಗಳ ಮೊತ್ತ ೨,೯೯,೦೯೩/-, ಒಟ್ಟು ಮೊತ್ತ ೪,೩೭,೬೪೬/-, ಮಾನವ ದಿನ ೩೯೭ ಆಗಿರುತ್ತದೆ. ಒಟ್ಟು೧೮೪ ಕುಟುಂಬಗಳಿದ್ದು ಒಟ್ಟು ಜನಸಂಖ್ಯೆ ೨೮೦ ಇದ್ದಾರೆ. ಮುಕ್ತಾಯ ಗೊಂಡ ಕಾಮಗಾರಿ ೭೩ ಆಗಿದ್ದು ೫೩ ಮನೆಗಳ ಭೇಟಿಯಾಗಿದೆ. ೩೬ ಕಡೆಗಳಲ್ಲಿ ನಾಮಫಲಕ ಅಳವಡಿಸಲಾಗಿದೆ.
















ಒಟ್ಟು ೯೭ ಕಾಮಗಾರಿ ನಡೆದಿದ್ದು, ಒಟ್ಟು ಮೊತ್ತ ೪೦,೩೮,೪೯೯/- ಆಗಿದ್ದು ಮಾನವ ದಿನ ೮೯೫೩ ಆಗಿರುತ್ತದೆ.ಯೋಜನೆಯಲ್ಲಿ ಮಾಡಿದ ಕಾಮಗಾರಿಗಳು ಸಿ.ಸಿ ರಸ್ತೆ, ಸಂಜೀವಿನಿ ಕಟ್ಟಡ, ಆವರಣ ಗೋಡೆ, ತೆರೆದ ಬಾವಿ ರಚನೆ, ಅಡಿಕೆ ಕೃಷಿ, ದನದ ಹಟ್ಟಿ ರಚನೆ, ಬಚ್ಚಲು ಗುಂಡಿ, ಕಾಳು ಮೆಣಸು ಕೃಷಿ, ಹಂದಿ ಶೆಡ್ ರಚನೆ, ಎರೆಹುಳು ಘಟಕ, ಕೋಳಿ ಶೆಡ್ ರಚನೆ, ಬಸಿ ಗಾಲುವೆ, ಶೌಚಾಲಯ ನಿರ್ಮಾಣ, ವಸತಿ ರಚನೆಯ ಕೆಲಸಗಳು ಗ್ರಾಮದಲ್ಲಿ ನಡೆಸಲಾಗಿದೆ.
೧೫ ನೇ ಹಣಕಾಸು ಯೋಜನೆಯಲ್ಲಿ ೩೧ ಕಾಮಗಾರಿಗಳು ನಡೆದಿವೆ. ಮೊತ್ತರೂ.೩೦,೫೧,೩೬೫/- ಆಗಿದ್ದು೧೨ ಕಡತಗಳು ಹಾಗೂ ಒಟ್ಟು ಮೊತ್ತ ರೂ.೧೦,೪೮,೩೦೦/-ಆಗಿದೆ. ರಾಜ್ಯ ಹಣಕಾಸು ಯೋಜನೆಯಲ್ಲಿ ೩೬ ಕಾಮಗಾರಿಗಳು ನಡೆದು ರೂ. ೫೦,೮೪,೬೭೦/-ಆಗಿದೆ.
ಜಿ. ಪಂ. ಯೋಜನೆಯಿಂದ ೫ ಕಾಮಗಾರಿಗಳಾಗಿದ್ದುಮೊತ್ತ ರೂ. ೧೬,೮೯,೪೩೨/- ಆಗಿರುತ್ತದೆ ಎಂದು ಸಂಯೋಜಕ ಚಂದ್ರಶೇಖರ ರವರು ವಿವರ ನೀಡಿದರು.
ಕೊಲ್ಚಾರಿನಲ್ಲಿ ನಿರ್ಮಿಸುತ್ತಿರುವ ಸಂಜೀವಿನಿ ಕಟ್ಟಡಕ್ಕೆ ಅನುದಾನದ ಕೊರತೆಯಾಗಿರುವುದರಿಂದ ಕಾಮಗಾರಿ ಪೂರ್ಣವಾಗಿಲ್ಲ. ಇದಕ್ಕೆ ಪರಿಹಾರ ಹೇಗೆ ಎಂದು ಸದಸ್ಯ ದಿನೇಶ್ ಕಣಕ್ಕೂರು ಪ್ರಶ್ನಿಸಿದರು.
ಕೂಲಿ ಮೊತ್ತ ಜಾಸ್ತಿ ಮಾಡುವಂತೆ ಸದಸ್ಯೆ ಪುಷ್ಪಾವತಿ ಕುಡೆಕಲ್ಲು ಅಭಿಪ್ರಾಯ ವ್ಯಕ್ತ ಪಡಿಸಿದರು.
ಉದ್ಯೋಗ ಖಾತರಿ ಯೋಜನೆಯಲ್ಲಿ ರಸ್ತೆ ಅಭಿವೃದ್ಧಿಗೆ ಅನುದಾನ ಇಡುವ ಬಗ್ಗೆ ಸದಸ್ಯ ಧರ್ಮ ಪಾಲ ಕೊಯಿಂಗಾಜೆ ಪ್ರಸ್ತಾಪಿಸಿದರು.
ಬಡ್ಡಡ್ಕದಿಂದ ರಂಗತ್ತಮಲೆ ರಸ್ತೆಯ ಅಭಿವೃದ್ಧಿಗೆ ಅನುದಾನ ಇಡುವಂತೆ ಸುನಿಲ್ ರಂಗತ್ತಮಲೆ ಬೇಡಿಕೆ ಇರಿಸಿದರು.
ಉದ್ಯೋಗ ಖಾತರಿ ಯೋಜನೆಯ ಕಾಮಗಾರಿ ಕೆಲಸ ಮಾಡುವ ಸಂದರ್ಭದಲ್ಲಿ ಮೂರು ಹಂತದಲ್ಲಿ ಭಾವಚಿತ್ರ ತೆಗೆದು ಇಡಬೇಕು. ಯೋಜನೆಯಲ್ಲಿ ವಾರ್ಷಿಕ ಒಟ್ಟು ಮೊತ್ತದಲ್ಲಿ ಶೇ.೧೦% ಮಾತ್ರ ರಸ್ತೆ ಅಭಿವೃದ್ಧಿಗೆ ಇಡಲು ಅವಕಾಶವಿದೆ. ೨೦೨೪-೨೫ ನೇ ಸಾಲಿನಲ್ಲಿ ಸಂಜೀವಿನಿ ಕಟ್ಟಡ ನಿರ್ಮಿಸಲು ರೂ.೧೦ ಲಕ್ಷ ನೀಡಲು ಅನುಮೋದನೆ ಇದ್ದು ಕೊಲ್ಚಾರ್ ನಲ್ಲಿ ನಿರ್ಮಿಸಲಾಗುತ್ತಿರುವ ಸಂಜೀವಿನಿ ಕಟ್ಟಡ ೨೦೨೩-೨೪ ನೇ ಸಾಲಿನಲ್ಲಿ ಆರಂಭಿಸಿರುವುದರಿಂದ ಹೆಚ್ಚುವರಿ ಅನುದಾನ ನೀಡಲು ಟೆಕ್ನಿಕಲ್ ಸಮಸ್ಯೆ ಇದೆ. ಈಗಾಗಲೇ ಈ ಕಟ್ಟಡ ಕಾಮಗಾರಿಯ ವಿವರ ನೀಡಲಾಗಿದ್ದು ಸರ್ಕಾರದ ಗಮನಕ್ಕೆ ತರಲಾಗಿದೆ. ಕಟ್ಟಡ ಕೆಲಸ ಪೂರ್ತಿಗೊಳಿಸುವ ಬಗ್ಗೆ ಪ್ರಯತ್ನಿಸಲಾಗುವುದು ಎಂದು ಯೋಜನೆಯ ತಾಂತ್ರಿಕ ಸಹಾಯಕ ಸುದನ್ವ ಕೃಷ್ಣ ರವರು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವೀಣಾ ವಸಂತ ಆಲೆಟ್ಟಿ, ಉಪಾಧ್ಯಕ್ಷೆ ಶ್ರೀಮತಿ ಕಮಲ ನಾಗಪಟ್ಟಣ,
ಪಿ. ಡಿ. ಒ ಜಯಪ್ರಕಾಶ್ ಉಪಸ್ಥಿತರಿದ್ದರು.
ಪಿ. ಡಿ ಒ ರವರು ಸ್ವಾಗತಿಸಿ, ವಂದಿಸಿದರು.
ಕು. ಪ್ರತಿಭಾ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿ ಗಳು ಸಹಕರಿಸಿದರು.










