
ಗುಜರಾತ್ ರಾಜ್ಯದ ಉಮರ್ ಗಾಂವ್ ಇಲ್ಲಿ ಭಾರತ ಸರಕಾರದ ಗ್ರೀನ್ ಹೀರೋ ಆಫ್ ಇಂಡಿಯಾ ಬಿರುದಾಂಕಿತ ಆರ್. ಕೆ. ನಾಯರ್ ಇವರ ತಕ್ಷಶಿಲಾ ಸೊಸೈಟಿಯ ಆವರಣದಲ್ಲಿ ನವರಾತ್ರೋತ್ಸವದ ವಿಜಯದಶಮಿಯಂದು ದೀಪಾಂಜಲಿ ಮಹಿಳಾ ಭಜನಾ ಮಂಡಳಿ (ರಿ.) ಶಾಂತಿನಗರ ಸುಳ್ಯ ಇವರಿಂದ ಆರ್. ಕೆ. ನಾಯರ್ ಅವರ ನಿವಾಸದಲ್ಲಿ ಹಾಗೂ 10.30ರಿಂದ ಮಧ್ಯಾಹ್ನ 1.30ರ ತನಕ ಸೊಸೈಟಿಯ ಆವರಣದಲ್ಲಿ ಭಜನಾ ಸಂಕೀರ್ತನೆಯು ನೆರವೇರಿತು.

ಮಂಡಳಿಯ 22 ಮಂದಿ ಅಲ್ಲಿ ಭಜನಾ ಸೇವೆಯಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭ ವಾಪಿ ಕನ್ನಡ ಸಂಘದ ಸದಸ್ಯರಿಂದ ಭಜನಾ ಸೇವೆಯು ನೆರವೇರಿತು. ಹಾಗೂ ಅದೇ ದಿನ ರಾತ್ರಿ ಭ್ರಾಮರಿ ಯಕ್ಷ ನೃತ್ಯ ಕಲಾ ನಿಲಯ ಮುಂಬಯಿ ಇವರಿಂದ ಹಿಂದಿಯಲ್ಲಿ ಯಕ್ಷಗಾನ ಪ್ರದರ್ಶನಗೊಂಡಿತು.


























