ನನ್ನ ಜೀವನದಲ್ಲಿ ಗುತ್ತಿಗಾರಿನ ಸೇವೆ ಮರೆಯದೆ ಉಳಿಯುತ್ತದೆ :ಧನಪತಿ
ನಾನು ಕಡು ಬಡತನದ ಮನೆಯಲ್ಲಿ ಹುಟ್ಟಿ ಸರ್ಕಾರಿ ಸೇವೆಗೆ ಬಂದಿದ್ದೇನೆ.
ಸೇವೆಯ ಸಂದರ್ಭದಲ್ಲಿ ಗುತ್ತಿಗಾರಿನ ಸೇವೆ ನನಗೆ ಅತಿ ಮಹತ್ವದ್ದು, ಗುತ್ತಿಗಾರಿಗೆ ಕರ್ತವ್ಯಕ್ಕೆ ಬರುವ ಮುಂಚೆ, ಇಲ್ಲಿ ಕರ್ತವ್ಯ ನಿರ್ವಹಿಸಲು ಕಷ್ಟ ಎಂದೆನಿಸಿದ್ದೆ, ಆದರೆ ಇಲ್ಲಿನ ಸಹಕಾರ ನನಗೆ ಹಿಡಿಸಿತು. ಇಲ್ಲಿನ ಸಹಕಾರ ಅಭಿವೃದ್ಧಿಗೆ ಪೂರಕ ಎಂದು ಪಿಡಿಒ ಧನಪತಿ ತಿಳಿಸಿದರು. ಅವರು ಅ.15 ರಂದು
ಗುತ್ತಿಗಾರು ಗ್ರಾಮ ಪಂಚಾಯತ್ ವತಿಯಿಂದ ವರ್ಗಾವಣೆ ಗೊಂಡು ನಡೆದ ಬೀಳ್ಕೊಡುಗೆ ಹಾಗೂ ಅಭಿನಂದನಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತಾ ಹೇಳಿದರು.
ಆರಂಭದಲ್ಲಿ ವರ್ಗಾವಣೆಗೊಂಡ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಧನಪತಿ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ ಗ್ರಾ.ಪಂ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದದವರಿಂದ ಚಿನ್ನದ ಉಂಗುರ ನೀಡಿ ಗೌರವಿಸಲಾಯಿತು.
ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಸುಮಿತ್ರಾ ಮೂಕಮಲೆ ಅಧ್ಯಕ್ಷತೆ ವಹಿಸಿದ್ದರು.
ಗ್ರಾ.ಪಂ. ಉಪಾಧ್ಯಕ್ಷೆ ಭಾರತಿ ಸಾಲ್ತಾಡಿ, ಗ್ರಾ. ಪಂ. ಸದಸ್ಯರಾದ ವೆಂಕಟ್ ವಳಲಂಬೆ, ವಿಜಯಕುಮಾರ್ ಚಾರ್ಮತ, ಗುತ್ತಿಗಾರು ಪ್ರಾ. ಕೃ. ಪ. ಸ. ಸಂಘದ ಮಾಜಿ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ, ಗುತ್ತಿಗಾರು ಪ್ರಾ. ಕೃ. ಪ. ಸ. ಸಂಘದ ಅಧ್ಯಕ್ಷರಾದ ಜಯಪ್ರಕಾಶ್ ಮೊಗ್ರ, ಗ್ರಾ. ಪಂ. ಸದಸ್ಯರಾದ. ಮಾಯಿಲಪ್ಪ ಕೊಂಬೊಟ್ಟು ವೇದಿಕೆಯಲ್ಲಿದ್ದು ಅನಿಸಿಕೆ ವ್ಯಕ್ತಪಡಿಸಿದರು.















ಬಳಿಕ ಗ್ರಾಮ ಪಂಚಾಯತ್ ವತಿಯಿಂದ ಹಾಗೂ ವರ್ತಕರ ಸಂಘದ ವತಿಯಿಂದ, ಅಮರ ಚಾರಿಟೇಬಲ್ ಸಂಸ್ಥೆಯ ವತಿಯಿಂದ, ಸಂಜೀವಿನಿ ಸಂಘದ ವತಿಯಿಂದ. ಜೂನಿಯರ್ ಕಾಲೇಜು ಗುತ್ತಿಗಾರು ವತಿಯಿಂದ ಗೌರವಿಸಲಾಯಿತು.
ಡಿ.ಆರ್. ಉದಯಕುಮಾರ್ ದೇರಪ್ಪಜ್ಜನ ಮನೆ, ರಾಘವೇಂದ್ರ ಕಾಂಪ್ಲೆಕ್ಸ್ ಮ್ಹಾಲಕರಾದ ಅನಿಲ್ ಕುಮಾರ್, ಸಂಜೀವಿನಿ ಸ್ವಸಹಾಯ ಸಂಘದ ಒಕ್ಕೂಟದ ಮಾಜಿ ಅಧ್ಯಕ್ಷರಾದ ಶ್ರೀಮತಿ, ದಿವ್ಯಾ ಸುಜನ್ ಗುಡ್ಡೆಮನೆ ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕರಾದ ಶ್ರೀಮತಿಅಭಿಲಾಷ ಇವರುಗಳು ಧನಪತಿ ಅವರಿಗೆ ಗೌರವ ಸಲ್ಲಿಸಿದರು.
ಸಂಜೀವಿನಿ ಸ್ವಸಹಾಯ ಸಂಘದ ಒಕ್ಕೂಟದ ಮಾಜಿ ಅಧ್ಯಕ್ಷರಾದ ಶ್ರೀಮತಿ. ದಿವ್ಯಾ ಸುಜನ್ ಗುಡ್ಡೆಮನೆ, ನಡುಗಲ್ಲು ದ.ಕ.ಜಿ.ಪ.ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯರಾದ ಚಂದ್ರಶೇಖರ ಪಾರೆಪ್ಪಾಡಿ, ಧನಪತಿ ಅವರ ಸೇವೆಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ನೂತನ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಾದ .ಅಜಿತ್ ಜಿ.ಕೆ. ಸೇಭೆಯನ್ನು ಉದ್ದೇಶಿಸಿ ಮಾತನಾಡಿದರು.
ಗ್ರಾ ಪಂ. ಸಿಬ್ಬಂದಿ ಶ್ರೀಮತಿ.ತೇಜೇಶ್ವರಿಯವರು ಅಭಿನಂದನಾ ಪತ್ರ ಓದಿದರು.
ಗ್ರಾ.ಪಂ. ಸದಸ್ಯೆ ಶ್ರೀಮತಿ.ಲೀಲಾವತಿ ಪ್ರಾರ್ಥನೆಗೈದರು. ವೆಂಕಟ್ ವಳಲಂಬೆಯವರು ಪ್ರಾಸ್ತಾವಿಕ ಭಾಷಣದೊಂದಿಗೆ ಸ್ವಾಗತಿಸಿದರು. ಶ್ರೀಮತಿ.ಭಾರತಿ ಸಾಲ್ತಾಡಿ ಧನ್ಯವಾದ ಮಾಡಿದರು.
ಸಭೆಯಲ್ಲಿ ವಿವಿಧ ಇಲಾಖಾಧಿಕಾರಿಗಳ ಸಿಬ್ಬಂದಿಗಳು, ಸಂಜೀವಿನಿ ಸ್ವಸಹಾಯ ಸಂಘದ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಗ್ರಾಮ ಪಂಚಾಯತ್ ಕಾರ್ಯದರ್ಶಿ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.



