ಆಟೋ ಚಾಲಕ ಜಬ್ಬಾರ್ ಮೃತ್ಯು ಪ್ರಕರಣಕ್ಕೆ ಕೊಲೆ ಆರೋಪದ ಟ್ವಿಸ್ಟ್

0

ಸುಳ್ಯ ಪೊಲೀಸ್ ಠಾಣೆಯಲ್ಲಿ ಓರ್ವನ ವಿಚಾರಣೆ

ನಿನ್ನೆ ರಾತ್ರಿ ಸುಳ್ಯದ ಬೆಟ್ಟಂಪಾಡಿಯಲ್ಲಿ ಮೃತಪಟ್ಟ ಆಟೋ ಚಾಲಕ ಜಬ್ಬಾರ್ ರವರ ಸಾವಿನ ಪ್ರಕರಣಕ್ಕೆ ಟ್ವಿಸ್ಟ್ ದೊರೆತಿದ್ದು, ಹಲ್ಲೆಯ ಕಾರಣದಿಂದ ಸಾವು ಸಂಭವಿಸಿರುವುದಾಗಿ ಪತ್ನಿ ದೂರು ನೀಡಿದ್ದಾರೆ.

ಜಬ್ಬಾರ್ ಮೇಲೆ ಹಲ್ಲೆ ನಡೆಸಿರುವರೆನ್ನಲಾದ ರಫೀಕ್ ಎಂಬವರನ್ನು ಸುಳ್ಯ ಪೋಲೀಸರು ಠಾಣೆಗೆ ಕರೆಸಿ ವಿಚಾರಣೆ ನಡೆಸುತ್ತಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.

ಜಬ್ಬಾರಿಗೆ ಹಲ್ಲೆ ಮಾಡಿರುವ ಕಾರಣ ಇವರು ಮೃತಪಟ್ಟಿದ್ದಾರೆ ಎಂದು ಕೂಡ ಊರಿನಲ್ಲಿ ವಿಷಯಗಳು ಪ್ರಚಾರದಲ್ಲಿದೆ. ಮೃತ ದೇಹವನ್ನು ಮಂಗಳೂರು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗಿದ್ದು ಪೊಲೀಸರ ಪ್ರಕಾರ ಮರಣೋತ್ತರ ಪರೀಕ್ಷೆ ಬಂದ ನಂತರ ಎಲ್ಲಾ ಮಾಹಿತಿ ತಿಳಿಯಬೇಕಾಗಿದೆ. ಜಬ್ಬಾರ್ ಅವರ ಪತ್ನಿಯ ದೂರಿನ ಮೇರೆಗೆ ರಫೀಕ್ ಅವರನ್ನು ಸುಳ್ಯ ಪೊಲೀಸರು ಠಾಣೆಗೆ ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.