ಪುನರ್ ಪ್ರತಿಷ್ಠ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ















ತೊಡಿಕಾನ ಗ್ರಾಮದ ಪಡ್ಪು ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಡಿಸೆಂಬರ್ 26, 27 ಮತ್ತು 28ರಂದು ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಅ. 18ರಂದು ದೈವಸ್ಥಾನದ ವಠಾರದಲ್ಲಿ ನಡೆಯಿತು.

ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಬಾಳೆಕಜೆ, ಗೌರವಾಧ್ಯಕ್ಷ ಪದ್ಮಯ ಗೌಡ ಪಡ್ಪು, ವ್ಯವಸ್ಥಾಪನ ಸಮಿತಿ ಟ್ರಸ್ಟ್ ಅಧ್ಯಕ್ಷ ಕೆ ಕೆ ನಾರಾಯಣ ಕುಂಟುಕಾಡು, ಉಪಾಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಮಹಿಳಾ ಸಮಿತಿ ಅಧ್ಯಕ್ಷೆ ಮಾಲತಿ ಭೋಜಪ್ಪ , ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಕೊಳಲುಮೂಲೆ ಹಾಗೂ ಪ್ರಮುಖರಿದ್ದು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.
ಜೀರ್ಣೋದ್ದಾರ ಸಮಿತಿ ಹಾಗೂ ವ್ಯವಸ್ಥಾಪನಾ ಸಮಿತಿ ಪ್ರಮುಖರಾದ ಆನಂದ ಕಲ್ಲಗದ್ದೆ, ರವೀಂದ್ರ ಪಂಜಿಕೋಡಿ, ದೀಪಕ್ ಕುತ್ತಮೊಟ್ಟೆ, ವೆಂಕಟ್ರಮಣ ಪೆತ್ತಾಜೆ, ತಿಮ್ಮಯ್ಯ ಮೆತ್ತಡ್ಕ, ಜಗದೀಶ್ ಬಾಳೆಕಜೆ, ಪ್ರಶಾಂತ್ ಕಾಪಿಲ, ಗೋಪಾಲಕೃಷ್ಣ ಗುಂಡಿಗದ್ದೆ, ಮಿಥುನ್ ಹಾಸ್ಪಾರೆ, ಮೋನಪ್ಪ ಬಾಳೆಕಜೆ, ಅಮ್ಮಣ್ಣಿ ಚಿಟ್ಟನ್ನೂರು, ಕಮಲಾಕ್ಷ ಪಡ್ಪು, ಲಕ್ಷ್ಮಣ ಪಡ್ಪು, ಹಿಮಕರ ಬಾಳೆಕಜೆ, ಆಕಾಶ್ ಪಾರೆಪ್ಪಾಡಿ ಮತ್ತಿತರರಿದ್ದರು.










