ಸುಳ್ಯದ ಪ್ರತಿಷ್ಠಿತ ಕೆ.ವಿ.ಜಿ. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ (NMC)ವು ವಿದ್ಯಾರ್ಥಿ ಪ್ರವೇಶವನ್ನು 100ರಿಂದ 150ಕ್ಕೆ ಹೆಚ್ಚಿಸಲು ಅನುಮೋದನೆ ನೀಡಿದೆ.















ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಡೀನ್ ಡಾ. ನೀಲಾಂಬಿಕೈ ನಟರಾಜನ್ ಅವರು , “ಈ ಸಾಧನೆಗೆ ಆಡಳಿತ ಮಂಡಳಿಯ ದೃಢವಾದ ಬೆಂಬಲ ಮತ್ತು ಮಾರ್ಗದರ್ಶನ ಪ್ರಮುಖ ಕಾರಣವಾಗಿದೆ. ಅಧ್ಯಕ್ಷ ಡಾ. ಕೆ.ವಿ. ಚಿದಾನಂದ, ಉಪಾಧ್ಯಕ್ಷೆ ಶ್ರೀಮತಿ ಶೋಭಾ ಚಿದಾನಂದ, ಜನರಲ್ ಸಕ್ರಟರಿ ಅಕ್ಷಯ್ ಕೆ.ಸಿ., ಮತ್ತು ಕಾರ್ಯದರ್ಶಿ ಡಾ. ಐಶ್ವರ್ಯ ಕೆ.ಸಿ., ಕೋಶಾಧಿಕಾರಿ ಡಾ. ಗೌತಮ್ ಅವರ ಸಹಕಾರದಿಂದಲೇ ಕಾಲೇಜು ಈ ಹಂತ ತಲುಪಲು ಸಾಧ್ಯವಾಯಿತು. ವೈದ್ಯಕೀಯ ಅಧೀಕ್ಷಕರಾದ ಡಾ. ಸಿ. ರಾಮಚಂದ್ರ ಭಟ್, ಕೆವಿಜಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ.ವಿ., ರಿಜಿಸ್ಟ್ರಾರ್ ಡಾ. ಸಂದೇಶ್ ಕೆ.ಎಸ್., NMC ನೋಡಲ್ ಅಧಿಕಾರಿ ಡಾ. ಗೀತಾ ಜೆ. ಡೋಪ್ಪಾ, ವಿಭಾಗಾಧ್ಯಕ್ಷರು ಹಾಗೂ ಎಲ್ಲಾ ಸಿಬ್ಬಂದಿಯ ಪರಿಶ್ರಮ ಮತ್ತು ತಂಡದ ಸಹಕಾರದಿಂದ ಸಾಧ್ಯವಾಯಿತು,” ಎಂದರು.
ವೈದ್ಯಕೀಯ ಅಧೀಕ್ಷಕರಾದ ಡಾ. ಸಿ. ರಾಮಚಂದ್ರ ಭಟ್ “ಆಸ್ಪತ್ರೆಯ ಮೂಲಸೌಕರ್ಯ ಮತ್ತು ಗುಣಮಟ್ಟದ ರೋಗಿ ಸೇವೆಯನ್ನು ವಿಸ್ತರಿಸಲು ನಡೆದ ನಿರಂತರ ಪ್ರಯತ್ನಗಳು ಈ ಸಾಧನೆಯಲ್ಲಿ ಪ್ರಮುಖ ಪಾತ್ರವಹಿಸಿವೆ. ಹೆಚ್ಚುವರಿ ವಿದ್ಯಾರ್ಥಿ ಪ್ರವೇಶದಿಂದ ಶಿಕ್ಷಣ ಮತ್ತು ಸೇವಾ ಚಟುವಟಿಕೆಗಳು ಇನ್ನಷ್ಟು ಬಲಪಡಿಸಲಿವೆ,” ಎಂದರು.










