ಸುಳ್ಯದ ಕುಂಭಕ್ಕೋಡು ಕಸ್ತೂರಿ ಅಚ್ಚುತ ಭಟ್ ಶಶಿಕಲಾ ಮಂದಿರದಲ್ಲಿ ಧನ ಲಕ್ಷ್ಮೀ ಪೂಜೆ ಹಾಗೂ ದೀಪಾವಳಿ ಸಂಭ್ರಮ

0

ಸುಳ್ಯದ ಒಡಬಾಯಿ ಯಲ್ಲಿರುವ ಕುಂಭಕ್ಕೋಡು ಕಸ್ತೂರಿ ಅಚ್ಚುತ ಭಟ್ ಶಶಿಕಲಾ ಮಂದಿರದಲ್ಲಿ ಧನ ಲಕ್ಷ್ಮೀ ಪೂಜೆ ಹಾಗೂ ದೀಪಾವಳಿ ಸಂಭ್ರಮ ಅ.21 ನಡೆಯಿತು.

ಈ ಸಂದರ್ಭದಲ್ಲಿ ಕುಂಭಕ್ಕೋಡು ಶಶಿಕಲಾ ಮಂದಿರದ ಮಾಲಕಿ ಶಶಿಕಲಾ ಶುಭಕರ ರಾವ್,ಶ್ರೀ ಲೂಬ್ರಿಕ್ಸ್ & ಸ್ಪೇರ್ಸ್
ಮಳಿಗೆಯ ಮಾಲಕ ರಾಜೇಶ್ ಪುತ್ತೂರು,ಚಿತ್ರಾ ವಾಗ್ಲೆ,ಸಂತೋಷ್ ಕುಂಭಕ್ಕೊಡು, ದೇವಿಪ್ರಸಾದ್ ಇಂಜಿನಿಯರ್,ಮಾಂಡೋವಿ ವ್ಯವಸ್ಥಾಪಕ ಚಂದ್ರಶೇಖರ, ರಾಜೇಶ್ ವೈಭವ್ ಟಯರ್,ಸಿಎ ಶ್ರೀನಿಧಿ, ಕಿರಣ್ ಐಡಿಯಲ್ ಟಿವಿಎಸ್ ,ಸಂದೇಶ್ ಭಟ್ ಎಂ ಆರ್ ಎಫ್,ಲತಾ ಪ್ರಭು,ಕೌಶಿಕ್ ವಾಗ್ಲೆ ಸಮೀಪದಲ್ಲಿರುವ ಶೋರೂಂ ಗಳ ಮಾಲಕರು ಮತ್ತು ಸಿಬ್ಬಂದಿ ವರ್ಗದವರು, ಸಾರ್ವಜನಿಕರು ಉಪಸ್ಥಿತರಿದ್ದರು. ಬಳಿಕ ಆಗಮಿಸಿದ ಸರ್ವರಿಗೂ ಉಪಹಾರ ನೀಡಿ ಸಿಹಿ ತಿಂಡಿ ಹಂಚಿ ಪಟಾಕಿ ಸಿಡಿಸಿ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.