ಕೊಡಗು ಸಂಪಾಜೆ : ಶ್ರೀ ಶಿರಾಡಿ ಫ್ರೆಂಡ್ಸ್ ಬೈಲು ಯುವಕ ಮಂಡಲ ಉದ್ಘಾಟನೆ ಹಾಗೂ ಲಾಂಛನ ಬಿಡುಗಡೆ

0

ಕೊಡಗು ಸಂಪಾಜೆ ಶ್ರೀ ಶಿರಾಡಿ ದೈವಸ್ಥಾನ ದಲ್ಲಿ ಶ್ರೀ ಶಿರಾಡಿ ಫ್ರೆಂಡ್ಸ್ ಬೈಲು ಯುವಕ ಮಂಡಲ ಉದ್ಘಾಟನೆ ಹಾಗೂ ಲೋಗೋ ಬಿಡುಗಡೆ ಅ.24 ರಂದು ಬಿಡುಗಡೆ ಮಾಡಲಾಯಿತು.

ಶಿತಾದುರಾಜನ್ ದೈವಸ್ಥಾನ ಸಮಿತಿಯ ಗೌರವಾಧ್ಯಕ್ಷರಾದ ಶಿವರಾಮ ಅಂಬೆಕಲ್ಲು ಹಾಗೂ ಅಡ್ಕಾರ್ ಪುರುಷೋತ್ತಮ ನೂತನ ಲಾಂಛನವನ್ನು ಬಿಡುಗಡೆಗೊಳಿಸಿ ಪುಷ್ಪಾರ್ಚನೆ ಮಾಡಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷರಾಗಿ ರೋಹಿತ್ ಕುಕ್ಕೇಟಿ, ಕಾರ್ಯದರ್ಶಿ ಹೃತಿಕ್ ಕುಕ್ಕೇಟಿ, ಹಾಗೂ ಖಜಾಂಚಿಯಾಗಿ ವಿಶ್ವಾಸ್ ಕುಕ್ಕೇಟಿ ಇವರು ಆಯ್ಕೆಯಾದರು. ಈ ಶುಭ ಸಂದರ್ಭದಲ್ಲಿ ಶಿರಾಡಿ ದೈವಸ್ಥಾನ ದ ಆಡಳಿತ ಮೊಕ್ತೇಸರರಾದ ಇಂದಿರಾ ದೇವಿಪ್ರಸಾದ್, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರು ಕಾರ್ಯದರ್ಶಿಗಳು, ಆಡಳಿತ ಸಮಿತಿ ಅಧ್ಯಕ್ಷರು, ಮನೆತದವರು, ಆಡಳಿತ ಸಮಿತಿ, ಜೀರ್ಣೋದ್ದಾರ ಸಮಿತಿ ಸದಸ್ಯರು, ಊರಿನ ಹಾಗೂ ಪರವೂರಿನ ಭಕ್ತಾದಿಗಳು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಸೇರಿದ ಎಲ್ಲರಿಗೂ ಧನ್ಯವಾದಗಳನ್ನು ಜೀರ್ಣೋದ್ದಾರ ಸಮಿತಿ ಯ ಕಾರ್ಯದರ್ಶಿ ನಾರಾಯಣ ಕುಕ್ಕೇಟಿ ಮಾಡಿದರು