ಸಂಜೀವಿನಿ ಒಕ್ಕೂಟದ ಸದಸ್ಯರಿಂದ ಸುಬ್ರಹ್ಮಣ್ಯ ರೈಲ್ವೆ ನಿಲ್ದಾಣದಲ್ಲಿ ಒಂದು ನಿಲ್ದಾಣ ಒಂದು ಉತ್ಪನ್ನ ಅ. 25ರಂದು ಶುಭಾರಂಭಗೊಂಡಿತು.








ದೀನ್ ದಯಾಳು ಅಂತ್ಯೋದಯ ಯೋಜನೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ,, ಜಿಲ್ಲಾ ಪಂಚಾಯತ್ ದಕ್ಷಿಣ ಕನ್ನಡ, ತಾಲೂಕು ಪಂಚಾಯತ್ ಕಡಬ, ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಬಿಳಿನೆಲೆ ನೆಟ್ಟಣ ಇದರ ಸಹಯೋಗದೊಂದಿಗೆ ಸುಬ್ರಮಣ್ಯ ರೋಡ್ ರೈಲ್ವೆ ಸ್ಟೇಷನ್ ನಲ್ಲಿ ನಂದಗೋಕುಲ ಒಕ್ಕೂಟದ ಸ್ವ ಸಹಾಯ ಸಂಘದ ಸದಸ್ಯರುಗಳಾದ ಭವ್ಯ, ದೀಪ್ತಿ, ಹೇಮಾ ಇವರ ಮೂಲಕ ಒಂದು ನಿಲ್ದಾಣ ಒಂದು ಉತ್ಪನ್ನ ಸಂಸ್ಥೆಯನ್ನು ದಕ್ಷಿಣ ಈಶಾನ್ಯ ರೈಲ್ವೆ ವಿಭಾಗದ ಮುಖ್ಯಸ್ಥರು ಉದ್ಘಾಟಿಸಿದರು. ಇಲ್ಲಿ ಜೇನುತುಪ್ಪ, ದನದ ತುಪ್ಪ, ಒಣಗಿದ ಗಾಂಧಾರಿಮೆಣಸು, ಹುಳಿಹುಡಿ, ಅರಶಿನಹುಡಿ, ಸಾಂಬಾರ್ ಹುಡಿ, ಬುಟ್ಟಿಗಳು, ವಿವಿಧ ರೀತಿಯ ಹಣ್ಣಿನ ರಸ, ಕರಿಮೆಣಸು ಹುಡಿ, ಎಳ್ಳೆಣ್ಣೆ, ಗ್ಲಾಸ್ ಕ್ಯಾಂಡಲ್, ಒಣ ನೆಲ್ಲಿಕಾಯಿ, ಮುಂತಾದ ಉತ್ಪನ್ನಗಳು ಸಿಗಲಿದೆ.
ಈ ಸಂದರ್ಭದಲ್ಲಿ ತಾಲೂಕು ಸಂಪನ್ಮೂಲ ವ್ಯಕ್ತಿ ಪಂಚಾಯತ್ ರಾಜ್ಯ ಸಂಸ್ಥೆ, ತಾಲೂಕು ಸಂಪನ್ಮೂಲ ವ್ಯಕ್ತಿ ಉದ್ಯಮಶೀಲತೆ – ಉತ್ತೇಜನೆ, ಹಾಗೂ ನಂದಗೋಕುಲ ಸಂಜೀವಿನಿ ಒಕ್ಕೂಟದ ಅಧ್ಯಕ್ಷರು, ಕಾರ್ಯದರ್ಶಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.










