ಜಗತ್ತಿಗೆ ನಿಖರ ಭವಿಷ್ಯ ನುಡಿಯುವ ಕೋಡಿ ಮಠದ ಸ್ವಾಮೀಜಿ ಉಪಸ್ಥಿತಿ
ಆನ್ ಲೈನ್ ಮೂಲಕವೂ ಸೇವೆಗೆ ಅವಕಾಶ
ಕರಿಕ್ಕಳ, ಎಣ್ಮೂರು-ಐವತ್ತೊಕ್ಲು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ
ನ. 05 ರಂದು ಶ್ರೀಮಹಾವಿಷ್ಣು ಮಹಾಯಾಗ ನಡೆಯಲಿದೆ.
ನಮ್ಮ ಋಷಿ ಪರಂಪರೆಯ ಸನಾತನ ಹಿಂದೂ ಧರ್ಮದ ಉಳಿವಿಗಾಗಿ, ಲೋಕ ಕಲ್ಯಾಣಾರ್ಥವಾಗಿ ಹಾಗೂ 2026ನೇ ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ಶ್ರೀ ದೇವರ ಪುನಃಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ ಹಾಗೂ ನೂತನ ದೇವಾಲಯದ ಲೋಕಾರ್ಪಣೆಯ ಪೂರ್ವಭಾವಿಯಾಗಿ, ಪರಮಪೂಜ್ಯ ಶ್ರೀಶ್ರೀಶ್ರೀ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಕೋಡಿಮಠ ಮಹಾಸಂಸ್ಥಾನ ಅರಸೀಕೆರೆ ಇವರ ಉಪಸ್ಥಿತಿಯಲ್ಲಿ, ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ವೇ। ಮೂ। ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಊರ ಹಾಗೂ ಪರವೂರ ಭಗವದ್ಭಕ್ತರ ಸಹಕಾರದೊಂದಿಗೆ ಶ್ರೀ ಕ್ಷೇತ್ರದ ಪ್ರಧಾನ ಅರ್ಚಕರಾದ ವೇ। ಮೂ। ಅಕ್ಷಯ ಭಟ್ ಬರ್ಲಾಯಬೆಟ್ಟು ಇವರ ಪೌರೋಹಿತ್ಯದಲ್ಲಿ ಶ್ರೀ ಕ್ಷೇತ್ರದಲ್ಲಿ ಸಾಮೂಹಿಕ ಶ್ರೀಮಹಾವಿಷ್ಣು ಮಹಾಯಾಗ ಜರಗಲಿರುವುದು.








ನ. 05 ರಂದು ಬೆಳಿಗ್ಗೆ ಗಂಟೆ 8 ಕ್ಕೆ ಶ್ರೀ ಮಹಾವಿಷ್ಣು ಮಹಾಯಾಗ ಪ್ರಾರಂಭ . ಬೆಳಿಗ್ಗೆ ಗಂಟೆ 10 ಕ್ಕೆ
ಶ್ರೀಶ್ರೀಶ್ರೀ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಕೋಡಿಮಠ, ಅರಸೀಕೆರೆ ಮಹಾಸಂಸ್ಥಾನದ ಶ್ರೀಗಳಿಂದ ಆಶೀರ್ವಚನ. ಮಧ್ಯಾಹ್ನ ಗಂಟೆ 12 ಕ್ಕೆ ಮಹಾಯಾಗದ ಪೂರ್ಣಾಹುತಿ, ಅಷ್ಟಾವಧಾನ ಸೇವೆ, ಮಧ್ಯಾಹ್ನ ಗಂಟೆ 12-30 ಕ್ಕೆ ಮಹಾಪೂಜೆ, ಮಧ್ಯಾಹ್ನ ಗಂಟೆ 1 ರಿಂದ ಪ್ರಸಾದ ಭೋಜನ ನಡೆಯಲಿದೆ. ಪೂಜೆ ಮಾಡಿಸುವ ಪ್ರತಿಯೊಬ್ಬರ ಹೆಸರಿನಲ್ಲಿ ದೇವರ ಮುಂದೆ ಸಂಕಲ್ಪ ಮಾಡಲಾಗುವುದು. ಆದುದರಿಂದ ಹೆಸರು. ನಕ್ಷತ್ರ, ರಾಶಿ ವಿವರ ನೀಡುವುದು.ಮಹಾಯಾಗದಲ್ಲಿ ಪಾಲ್ಗೊಳ್ಳಲು ಅಸಾಧ್ಯವಾದಲ್ಲಿ ಪೂಜಾ ಪ್ರಸಾದವನ್ನು ಕಳುಹಿಸಲಾಗುವುದು. ತಮ್ಮ ವಿಳಾಸ ವಾಟ್ಸಪ್ ಮೂಲಕ ತಿಳಿಸುವುದು. ದೇವಳದ ವಾಟ್ಸಪ್ ನಂ. 8747020030.
ಶ್ರೀ ಕ್ಷೇತ್ರದಲ್ಲಿ ಪ್ರತೀ ತಿಂಗಳ ಹುಣ್ಣಿಮೆಯ ದಿನ ರಾತ್ರಿ ಸಾಮೂಹಿಕ ದುರ್ಗಾಪೂಜೆ ನಡೆಯಲಿರುವುದು. ಪ್ರತೀ ತಿಂಗಳ ಎರಡನೇ ಶನಿವಾರದಂದು ಸಾಮೂಹಿಕ ಸತ್ಯನಾರಾಯಣ ಪೂಜೆ . ಪ್ರತೀ ತಿಂಗಳ 4ನೇ ಶನಿವಾರದಂದು ಸಾಮೂಹಿಕ ಶನಿಪೂಜೆ, ಪ್ರತೀ ತಿಂಗಳ ಸಂಕಷ್ಟ ಚತುರ್ಥಿಯಂದು ಸಾಮೂಹಿಕ ಗಣಪತಿ ಹೋಮ ನಡೆಯಲಿರುವುದು ಎಂದು ದೇವಳದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










