ನ. 1 – 7: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸುಳ್ಯದ ವಿವಿಧ ಭಾಗಗಳಲ್ಲಿ ಸಾಹಿತ್ಯ ಸಂಭ್ರಮ- 2025

0

ದಿ. ಯು. ಸು. ಗೌ. ಸ್ಮರಣಾರ್ಥ
ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನ -2025

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸುಳ್ಯ ತಾಲೂಕು ಘಟಕ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಯೋಜನೆ

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ, ಇದರ ಆಶ್ರಯದಲ್ಲಿ ವಿವಿಧ ಸಂಘ ಸಂಸ್ಥೆಗಳಸಹಕಾರದೊಂದಿಗೆ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸಾಹಿತ್ಯ ಸಂಭ್ರಮ -೨೦೨೫ ಕಾರ್ಯಕ್ರಮವು ನ. 1 ರಿಂದ ನ. 7 ರ ವರೆಗೆ ವಿವಿಧ ಕಡೆಗಳಲ್ಲಿ ನಡೆಯಲಿರುವುದಾಗಿ ಅ. 30 ರಂದು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿನಡೆದಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಚಂದ್ರಶೇಖರ ಪೇರಾಲು ರವರು ತಿಳಿಸಿದರು.

ನ. 1 ರಂದು ಅಪರಾಹ್ನ 2.೦೦ಗಂಟೆಗೆ ಸಾಹಿತ್ಯ ಸಂಭ್ರಮ -೨೦೨೫ರ ಉದ್ಘಾಟನಾ ಸಮಾರಂಭ ಹಾಗೂ ಕನ್ನಡ ಗಾನ ಕಲರವ ಕಾರ್ಯಕ್ರಮವು ರಂಗಮಯೂರಿ ಕಲಾಶಾಲೆಯ ಸಹಕಾರದೊಂದಿಗೆ ರಂಗಮಯೂರಿ ಕಲಾಶಾಲೆಯಲ್ಲಿ ನಡೆಯಲ್ಲಿದ್ದು, ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಡಾ| ಯು. ಪಿ. ಶಿವಾನಂದ ರವರು ಉದ್ಘಾಟಿಸಲಿರುವರು. ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತ್ ನ ಅಧ್ಯಕ್ಷ ಚಂದ್ರಶೇಖರ ಪೇರಾಲ್ ಸಭಾದ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾರದಾಂಬಾ ಸೇವಾ ಸಮಿತಿಯ ಅಧ್ಯಕ್ಷ ನಾರಾಯಣ ಕೇಕಡ್ಕ ಭಾಗವಹಿಸಲಿದ್ದಾರೆ. ತಾಲೂಕಿನ ಹೆಸರಾಂತ ಗಾಯಕರು ಮತ್ತು ನೆಹರೂ ಮೆಮೋರಿಯಲ್ ಕಾಲೇಜಿನ ತುಳಸಿ ಮತ್ತು ತಂಡ ಹಾಗೂ ಸುಳ್ಯದ ರಂಗಮಯೂರಿ ಕಲಾ ಶಾಲಾ ವಿದ್ಯಾರ್ಥಿಗಳು ನಡೆಸಿಕೊಡಲಿರುವರು.
ದಿ. ಯು. ಸು. ಗೌ ಸ್ಮರಣಾರ್ಥ
ಮಕ್ಕಳ ಸಾಹಿತ್ಯ ಸಮ್ಮೇಳನ:

ನ. 2 ರಂದು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತ್ ಸುಳ್ಯ ಹೋಬಳಿ ಘಟಕ ಹಾಗೂ ಅಮೃತ ಮಹೋತ್ಸವ ಸಮಿತಿ ಸರಕಾರಿ ಪದವಿಪೂರ್ವ ಕಾಲೇಜು ಸುಳ್ಯ ಇದರ ಸಹಕಾರದೊಂದಿಗೆ ದಿ| ಯು. ಸುಬ್ರಾಯ ಗೌಡ ಸ್ಮರಣಾರ್ಥ ಸುಳ್ಯ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನವು ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕು. ಪೌರ್ಣಮಿ ಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿ. ಬಿ. ಸುಧಾಕರ ರೈ, ಲಿಂಗಪ್ಪ ಗೌಡ ಕೇರ್ಪಳ ರವರು ಧ್ವಜಾರೋಹಣ ವನ್ನು ನೆರವೇರಿಸಲಿರುವರು.
ದೀಪ ಪ್ರಜ್ವಲನೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷರಾದ ಡಾ| ಕೆ. ವಿ. ಚಿದಾನಂದ
ರವರು ನೆರವೇರಿಸಲ್ಲಿದ್ದು, ಮುಖ್ಯ ಅತಿಥಿಗಳಾಗಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆಯ ವಿದ್ಯಾರ್ಥಿನಿ
ಕು. ಆತ್ಮೀಯ ಕೆ. ಭಾಗವಹಿಸಲಿದ್ದಾರೆ.
ಸಭಾ ಕಾರ್ಯಕ್ರಮದ ಬಳಿಕ ತಾಲೂಕಿನ ವಿವಿಧ ಶಾಲಾ ಕಾಲೇಜು ವಿದಾರ್ಥಿಗಳಿಂದ ವಿದ್ಯಾರ್ಥಿ ಕವಿಗೋಷ್ಠಿ ನಡೆಯಲಿದೆ. ಅಪರಾಹ್ನ “ಡಿಜಿಟಲ್ ಯುಗದಲ್ಲಿ ಕನ್ನಡ ಭಾಷಾ ಬೆಳವಣಿಗೆ – ಒಂದು ಸವಾಲು” ಎಂಬ ವಿಷಯದ ಬಗ್ಗೆ ವಿದ್ಯಾರ್ಥಿ ಚರ್ಚಾ ಗೋಷ್ಠಿ ನಡೆಯಲ್ಲಿದ್ದು,ಪ್ರಕಾಶ್ ಮೂಡಿತ್ತಾಯ ಸಮಾನ್ವಯಕಾರರಾಗಿ ಭಾಗವಹಿಸಲಿದ್ದಾರೆ. ಅಪರಾಹ್ನ ಮಕ್ಕಳ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭವು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತ್ ನ ಅಧ್ಯಕ್ಷರಾದ ಚಂದ್ರಶೇಖರ ಪೇರಾಲ್
ಅದ್ಯಕ್ಷತೆಯಲ್ಲಿ ನಡೆಯಲ್ಲಿದ್ದು, ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜಿನ ವಿದಾರ್ಥಿನಿ ಕು. ಶ್ರೇಯಾ ಎಂ. ಸಮಾರೋಪ ಭಾಷಣ ಮಾಡಲಿದ್ದಾರೆ ಎಂದು ಸುಳ್ಯ ಹೋಬಳಿ ಘಟಕದ ಅಧ್ಯಕ್ಷೆ ಚಂದ್ರಾವತಿ ಬಡ್ಡಡ್ಕ ರವರು ತಿಳಿಸಿದರು.

ನ. 3 ರಂದು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸರಕಾರಿ ಉನ್ನತ್ತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮಂಡೆಕೋಲು ಇದರ ಸಹಕಾರದೊಂದಿಗೆ ಕನ್ನಡಗಾನ ಯಾನ ಕಾವ್ಯಮಿಲನ ಹಾಗೂ ಸ್ಪರ್ಧಾ ಕಾರ್ಯಕ್ರಮ ಮಂಡೆಕೋಲಿನಲ್ಲಿ ನಡೆಯಲಿದೆ.
ನ. 4 ರಂದು ನೆಹರು ಮೆಮೋರಿಯಲ್ ಕಾಲೇಜ್, ಸುಳ್ಯ ಇದರ ಕನ್ನಡ ಸಂಘಹಾಗೂ ಕನ್ನಡ ವಿಭಾಗದಸಹಕಾರದೊಂದಿಗೆ ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಕನ್ನಡ ನುಡಿ ಸಂಭ್ರಮ – ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ.
ನ. 5 ರಂದು ಪ್ರೆಸ್ ಕ್ಲಬ್ ಸುಳ್ಯ ಇದರ ಸಹಕಾರದೊಂದಿಗೆ ಕನ್ನಡ ರಾಜ್ಯೋತ್ಸವ ಉಪನ್ಯಾಸ – ಪತ್ರಕರ್ತ ಸಾಹಿತಿಗಳ ಬೆಳದಿಂಗಳ ಕವಿಗೋಷ್ಠಿ ಕಾರ್ಯಕ್ರಮ ಸುಳ್ಯದ ಅಂಬಟಡ್ಕದಲ್ಲಿರುವ ಪ್ರೆಸ್ ಕ್ಲಬ್‌ನಲ್ಲಿ ನಡೆಯಲಿದೆ.
ಡಾ. ಸುಂದರ ಕೇನಾಜೆಯವರು “ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಕರ್ತರ ಪಾತ್ರ” ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲ್ಲಿದ್ದಾರೆ.
ಪ್ರೆಸ್‌ಕ್ಲಬ್ ಗೌರವಾಧ್ಯಕ್ಷ ಹರೀಶ್ ಬಂಟ್ವಾಳ್ ರವರ ಅಧ್ಯಕ್ಷತೆಯಲ್ಲಿ ಪತ್ರ ಕರ್ತ ಸಾಹಿತಿಗಳ ಬೆಳದಿಂಗಳ ಕವಿಗೋಷ್ಠಿ ಕಾರ್ಯಕ್ರಮ ನಡೆಯಲಿದೆ.

ನ. 6 ರಂದು ಕನ್ನಡ ಸಾಹಿತ್ಯ ಪರಿಷತ್ತು ಪಂಜ ಹೋಬಳಿ ಘಟಕ ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಪ್ರಧಾನ ಮಂತ್ರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಗುತ್ತಿಗಾರು ಇವರ ಸಹಕಾರದೊಂದಿಗೆ ಪಂಜ ಹೋಬಳಿ ಮಟ್ಟದ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಕನ್ನಡ ನಾಡು ನುಡಿ ಕಲರವ ಹಾಗೂ ವಿದಾರ್ಥಿಗಳಿಗೆ ಸ್ಥಳದಲ್ಲಿಯೇ ಕವನ ರಚನೆ, ಕನ್ನಡ ಭಾಷಣ,
ಕನ್ನಡ ಗೀತ ಗಾಯನ ಸ್ಪರ್ಧೆಗಳು ಪ್ರಧಾನ ಮಂತ್ರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣ ಗುತ್ತಿಗಾರಿನಲ್ಲಿ ನಡೆಯಲಿದೆ.

ನ. 7 ರಂದು ಸಂಜೆ ಗಂಟೆ 5.30 ರಿಂದ ಮಿತ್ರ ಯುವಕ ಮಂಡಲ ಕೊಯಿಕುಳಿ ಹಾಗೂ ಕುರಲ್ ತುಳುಕೂಟ ದುಗಲಡ್ಕ ಇವರ ಸಹಕಾರದೊಂದಿಗೆ ಸಾಹಿತ್ಯ ಸಂಭ್ರಮದ ಸಮಾರೋಪ ಸಮಾರಂಭ, ಸನ್ಮಾನ ಗಾನ ವೈಭವ ಕಾರ್ಯಕ್ರಮ ಅಯ್ಯಪ್ಪ ಭಜನಾ ಮಂದಿರ ದುಗಲಡ್ಕದಲ್ಲಿ ನಡೆಯಲಿರುವುದು.
ಕನ್ನಡ ಸಾಹಿತ್ಯ ಪರಿಷತ್ತ್ನ ಅಧ್ಯಕ್ಷ ಚಂದ್ರಶೇಖರ ಪೇರಾಲ್ ಅಧ್ಯಕ್ಷತೆಯಲ್ಲಿ ನಡೆಯಲ್ಲಿದ್ದು, ನಗರ ಯೋಜನಾ ಪ್ರಾಧಿಕಾರ ಸುಳ್ಯ ಇದರ ಅಧ್ಯಕ್ಷ . ಕೆ. ಎಂ. ಮುಸ್ತಫಾ ಸಮಾರೋಪ ಭಾಷಣ ಮಾಡಲಿರುವರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಪೂರ್ವಾಧ್ಯಕ್ಷ. ಪಿ. ಸಿ. ಜಯರಾಮ ಸಾಧಕರನ್ನು ಸನ್ಮಾನಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಇದರ ಅಧ್ಯಕ್ಷ ಸದಾನಂದ ಮಾವಜಿ ಭಾಗವಹಿಸಲಿದ್ದಾರೆ. ಶ್ರೀಮತಿ. ಉದಯಕುಮಾರಿ ಬಿರ್ಮಕಜೆ ಇವರಿಗೆ ಕಾದಂಬರಿ ಕ್ಷೇತ್ರದಲ್ಲಿ, ಡಾ. ಚಂದ್ರಶೇಖರ ದಾಮ್ಲೆ ಇವರಿಗೆ ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಹಾಗೂ ಚಂದ್ರಶೇಖರ ಮೋಂಟಡ್ಕ ಇವರಿಗೆ ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಕನ್ನಡ ರಾಜ್ಯೋತ್ಸವ ಸನ್ಮಾನ ನೀಡಿ ಗೌರವಿಸಲಾಗುವುದು.
ಬಳಿಕ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಪ್ರಾಯೋಜಕತ್ವದಲ್ಲಿ ಯಕ್ಷಗಾನ ವೈಭವ ಕಾರ್ಯಕ್ರಮ ನಡೆಯಲಿರುವುದಾಗಿ
7 ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮದ ಸಂಪೂರ್ಣ ವಿವರ ನೀಡಿದರು.

ಪತ್ರಿಕಾ ಗೋಷ್ಠಿಯಲ್ಲಿ ಸಾಹಿತ್ಯ ಪರಿಷತ್ ಪದಾಧಿಕಾರಿಗಳಾದ
ತೇಜಸ್ವಿ ಕಡಪಳ,
ದಯಾನಂದ ಆಳ್ವ,
ಬಾಬು ಗೌಡ ಅಚ್ರಪ್ಪಾಡಿ , ಶ್ರೀಮತಿ ಚಂದ್ರಾವತಿ ಬಡ್ಡಡ್ಕ, ಶ್ರೀಮತಿ
ಲತಾಶ್ರೀ ಸುಪ್ರೀತ್ ಮೋಂಟಡ್ಕ, ಕೇಶವ ಸಿ. ಎ, ರಾಮಚಂದ್ರ ಪಿ ಉಪಸ್ಥಿತರಿದ್ದರು.