ಈ ಬಾರಿಯೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸುಳ್ಯಕ್ಕಿಲ್ಲ ..?

0

ಕಳೆದ ಬಾರಿಯಂತೆ ಈ ಬಾರಿಯೂ ಸುಳ್ಯವನ್ನು ಕಡೆಗಣಿಸಿತೇ ಜಿಲ್ಲಾಡಳಿತ ?

ದ.ಕ. ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು , ಇದರಲ್ಲಿ ಈ‌ ಬಾರಿಯೂ ಸುಳ್ಯ ತಾಲೂಕಿನವರ ಹೆಸರಿಲ್ಲ.

68 ಸಾಧಕರು ಹಾಗೂ 18 ಸಂಘ ಸಂಸ್ಥೆಗಳಿಗೆ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಈ ಪಟ್ಟಿಯಲ್ಲಿದೆ.

ಕಳೆದ ವರ್ಷವೂ ಕೂಡಾ ಸುಳ್ಯಕ್ಕೆ ಪ್ರಶಸ್ತಿ ನೀಡದೇ ಕಡೆಗಣಿಸಲಾಗಿತ್ತು. ತಾಲೂಕಿನಲ್ಲಿ ಅಸಮಾಧಾನ ವ್ಯಕ್ತವಾಗಿ‌ ಜಿಲ್ಲಾಡಳಿತಕ್ಕೆ ಫೋನಿನ ಮೇಲೆ ಫೋನ್ ಕರೆಗಳು ಹೋದ ಹಿನ್ನೆಲೆಯಲ್ಲಿ ಕೊನೆ ಘಳಿಗೆಯಲ್ಲಿ‌ ಕೆ.ಗೋಕುಲದಾಸ್ ರಿಗೆ ಪ್ರಶಸ್ತಿ ‌ನೀಡಲಾಗಿತ್ತು.


ಈ ಬಾರಿ ಹಿರಿಯ ಪತ್ರಕರ್ತ ಗಂಗಾಧರ ಮಟ್ಟಿಯವರ ಹೆಸರನ್ನು ಜಿಲ್ಲಾಡಳಿತಕ್ಕೆ ಕಳುಹಿಸಲಾಗಿದ್ದರೂ ಅವರ ಹೆಸರು ಪಟ್ಟಿಯಲ್ಲಿ ಕಾಣುತ್ತಿಲ್ಲ. ಅಸಲಿಗೆ ಈ ಪಟ್ಟಿ ಅಧಿಕೃತವೇ ಅನಧಿಕೃತವೇ ಎಂಬುದೂ ಗೊತ್ತಾಗುತ್ತಿಲ್ಲ. ಯಾಕೆಂದರೆ ಆ ಪಟ್ಟಿಯ ತಳಭಾಗದಲ್ಲಾಗಲೀ ಶಿರಭಾಗದಲ್ಲಾಗಲೀ ಯಾರ ಸಹಿಯೂ ಇಲ್ಲ.
ಆದರೂ ಸುಳ್ಯವೊಂದನ್ನು ಹೊರತುಪಡಿಸಿ ಇತರ ಎಲ್ಲ ತಾಲೂಕುಗಳ ಹೆಸರುಗಳು ಇದೆ. ಸುಳ್ಯ ತಾಲೂಕು ದ.ಕ. ಜಿಲ್ಲೆಯ ಭೂಪಟದಲ್ಲಿ ಇದೆ ಎಂಬುದನ್ನೇ ಜಿಲ್ಲಾಡಳಿತ ಮರೆತಿದೆಯೇ ಎಂಬ ಪ್ರಶ್ನೆ ಮೂಡತೊಡಗಿದೆ.