ಬ್ಲಾಕ್ ಕಾಂಗ್ರೆಸ್ ಮೂವರ ಹೆಸರು ಶಿಫಾರಸು ಮಾಡಿತ್ತು: ಪಿ.ಎಸ್.
ಕ.ಸಾ.ಪ. ವತಿಯಿಂದಲೂ ಒಬ್ಬರ ಹೆಸರು : ಪೇರಾಲು
ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಪ್ರಕಟಗೊಂಡಿದ್ದು ಆ ಪಟ್ಟಿಯಲ್ಲಿ ಸುಳ್ಯದ ಒಬ್ಬರ ಹೆಸರು ಕೂಡಾ ಇಲ್ಲದಿರುವುದು ಸುಳ್ಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.















ಈ ಕುರಿತು ಪ್ರತಿಕ್ರಿಯೆ ನೀಡಿರುವ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ ರವರು “ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಪ್ರಕಟಗೊಂಡಿದ್ದು ಸುಳ್ಯವನ್ನುಜಿಲ್ಲಾಡಳಿತ ಕಡೆಗಣಿಸಿರುವುದು ಸರಿಯಲ್ಲ ಎಂದು ಹೇಳಿದ್ದಾರೆ. ” ಬ್ಲಾಕ್ ಕಾಂಗ್ರೆಸ್ ಸುಳ್ಯದ ಹಿರಿಯ ಪತ್ರಕರ್ತರಾದ ಗಂಗಾಧರ ಮಟ್ಟಿ ಸೇರಿದಂತೆ ಮೂವರ ಹೆಸರು ಕಳುಹಿಸಿತ್ತು. ಅವರೆಲ್ಲ ಪ್ರಶಸ್ತಿ ಗೆ ಅರ್ಹರು. ಆದರೂ ಜಿಲ್ಲಾಡಳಿಡ ಪರಿಗಣಿಸದಿರುವುದು ಸರಿಯಲ್ಲ. ಇದನ್ನು ನಾವು ಪ್ರಶ್ನಿಸಿದ್ದೇವೆ” ಎಂದು ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪೇರಾಲುರನ್ನು ಸಂಪರ್ಕಿಸಿ ವಿಚಾರಿಸಿದಾಗ, ಪ್ರಶಸ್ತಿ ಪಟ್ಟಿ ನಾನು ನೋಡಿಲ್ಲ. ಕ.ಸಾ.ಪ. ವತಿಯಿಂದ ಪತ್ರಕರ್ತರಾದ ಗಂಗಾಧರ ಮಟ್ಟಿಯವರ ಹೆಸರನ್ನು ಸೂಚಿಸಲಾಗಿತ್ತು” ಎಂದು ಹೇಳಿದರು.










