
ನೆಹರೂ ಮೆಮೋರಿಯಲ್ ಕಾಲೇಜು ಇದರ ವತಿಯಿಂದ ಕಸಿ ಕಟ್ಟುವಿಕೆ ಮತ್ತು ಎರೆಹುಳ ಗೊಬ್ಬರ”ದ ಮಾಹಿತಿ ಕಾರ್ಯಗಾರವನ್ನು ಅಕ್ಟೋಬರ್ 31 ರಂದು ಅಜ್ಜಾವರದ ಕೊರಂಗುಬೈಲು ಇಲ್ಲಿಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಬಾಲಕೃಷ್ಣ ನಾಯ್ಕ್ ಅವರ ಮನೆಯಲ್ಲಿ ನಡೆಸಲಾಯಿತು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಜ್ಜಾವರ ಇದರ ಅಧ್ಯಕ್ಷರಾದ ಶ್ರೀಮತಿ ದೇವಕಿ ವಹಿಸಿದ್ದರು. ಬಾಲಕೃಷ್ಣ ನಾಯ್ಕ್ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ “ಸಮಾಜ ಕಾರ್ಯ ವಿಭಾಗವು ಸಮಾಜಕ್ಕೆ ತುಂಬಾ ಉತ್ತಮ ರೀತಿಯ ಉಪಯುಕ್ತವಾಗುವ ಕಾರ್ಯಕ್ರಮವನ್ನು ನಡೆಸುತ್ತಾ ಬರುತ್ತಿದೆ, ಇಂತಹ ಕಾರ್ಯಕ್ರಮಗಳನ್ನು ಮುಂದೆಯೂ ನಡೆಸುವಂತಾಗಲಿ ಎಂದು ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು.ಹಾಗೆಯೇ ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ಸಂಜೀವ ಕುದ್ಪಾಜೆ, ಮುಖ್ಯಸ್ಥರು ಕನ್ನಡ ವಿಭಾಗ, ಎನ್. ಎಂ. ಸಿ ಸುಳ್ಯ, ಹಾಗೂ ಶ್ರೀಮತಿ ನಂದಿತಾ ಬಿ. ಎ, ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರು, ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸುಳ್ಯ ಮತ್ತು ಮುಖ್ಯ ಅತಿಥಿಗಳಾದ ಶ್ರೀಮತಿ ಚಿತ್ರಲೇಖ ಕೆ. ಎಸ್,ಮುಖ್ಯಸ್ಥರು ಸಮಾಜಶಾಸ್ತ್ರ ವಿಭಾಗ, ಎನ್. ಎಂ. ಸಿ ಸುಳ್ಯ ಹಾಗೂ ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಶೋಭಾ ಎ ಉಪಸ್ಥಿತರಿದ್ದರು. ಹಾಗೂ ಸುಳ್ಯ ತಾಲ್ಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಚನಿಯ ಕಲ್ತಡ್ಕ,ನೆಹರು ಮೆಮೋರಿಯಲ್ ಕಾಲೇಜಿನ ಬಿ.ಬಿ. ಎ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಮೀನಾಕ್ಷಿ, ರಾಜೇಶ್ ರೈ ಮೇನಾಲ, ಗಿರಿಧರ ನಾರಲು, ಶ್ರೀಮತಿ ಲೀಲಾವತಿ, ಗ್ರಾಮ ಪಂಚಾಯತ್ ಅಜ್ಜಾವರ ಇದರ ಅರಿವು ಕೇಂದ್ರ (ಗ್ರಂಥಾಲಯ )ದ ಮೇಲ್ವಿಚಾರಕಿ ಲಕ್ಷ್ಮಿ, ಪ್ರತಾಪ ಯುಕ ಮಂಡಲ ಅಜ್ಜಾವರ ಇದರ ಅಧ್ಯಕ್ಷರಾದ ಗುರುರಾಜ್ ಅಜ್ಜಾವರ, ಚೈತ್ರ ಯುವತಿ ಮಂಡಲ ಅಜ್ಜಾವರ ಇದರ ಅಧ್ಯಕ್ಷೆ ಶಶ್ಮಿ ಭಟ್,ಸಂಜೀವಿನಿ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರಾದ ಜಯಶ್ರೀ, ಹಾಗೆಯೇ ಶ್ರೀ ರಕ್ಷಾ ಸಂಜೀವಿನಿ ಒಕ್ಕೂಟ ಅಜ್ಜಾವರ ಇದರ ಅಧ್ಯಕ್ಷರಾದ ಉಷಾ, ಶ್ರೀ ನಿಧಿ ಸ್ತ್ರೀ ಶಕ್ತಿ ಗೊಂಚಲು ಅಜ್ಜಾವರ, ಓಂ ಫ್ರೆಂಡ್ಸ್ ಅಜ್ಜಾವರ ಇವುಗಳ ಎಲ್ಲಾ ಸದಸ್ಯರು,ಗ್ರಾಮಸ್ಥರು ಹಾಗೂ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ವಿವಿಧ ರೀತಿಯಲ್ಲಿ ಸಹಕರಿಸಿದರು.















ಸಭಾ ಕಾರ್ಯಕ್ರಮದ ನಂತರ ಸಂಪನ್ಮೂಲ ವ್ಯಕ್ತಿಯಾದ
ಸಂಜೀವ ಕುದ್ಪಾಜೆ ಯವರು ” ಕಸಿ ಕಟ್ಟುವಿಕೆಯ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆಯನ್ನು ನೀಡಿದರು “. ಇನ್ನೋರ್ವ ಸಂಪನ್ಮೂಲ ವ್ಯಕ್ತಿಯಾದ ಶ್ರೀಮತಿ ನಂದಿತಾ ಬಿ. ಎ ಯವರು ” ಎರೆ ಹುಳ ಗೊಬ್ಬರ”ದ ತಯಾರಿ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆಯನ್ನು ನೀಡಿದರು.

ಕಾರ್ಯಕ್ರಮದ ಸಂಯೋಜಕರಾದ ಅಕ್ಷತಾ ಕೆ. ವಿ, ಜಿತೇಶ್ ಎನ್. ಆರ್, ಆಕಾಶ್ ಗರುಗುಂಜಾ, ಮತ್ತು ಪೂಜಿತ್ ಬಿ ಕ್ರಮವಾಗಿ ಕಾರ್ಯಕ್ರಮವನ್ನು ನಿರೂಪಿಸಿ, ಪ್ರಾರ್ಥಿಸಿ, ಸ್ವಾಗತಿಸಿ, ವಂದಿಸಿದರು.










