ಸುಳ್ಯ ಕನ್ನಡ ರಾಜ್ಯೋತ್ಸವ : ಶಾಸಕರು ಬಾರದೆ ಕಾದು ಸುಸ್ತಾದ ಮಕ್ಕಳು

0

ಬಿಸಿಲಲ್ಲೇ ನಿಂತ ನೂರಾರು ವಿದ್ಯಾರ್ಥಿಗಳು

ಸುಳ್ಯ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜನೆಗೊಂಡಿದ್ದು 9ಗಂಟೆಗೆ ಧ್ವಜಾರೋಹಣ ‌ನಡೆಯಬೇಕಿತ್ತು. ಆದರೆ ಶಾಸಕರು ಬರುವುದು ತಡವಾಗಿರುವುದರಿಂದ ಮಕ್ಕಳು ಬಿಸಿಲಲ್ಲೇ ಕಾಯುವಂತಾಗಿದೆ.‌ಕೆಲವರು ತಲೆ ಸುತ್ತು ಬಂದು‌ಬದಿಗೆ ಹೋಗುತ್ತಿರುವ ಘಟನೆಯೂ ನಡೆಯಿತು. 9.25 ಕಳೆದರೂ ರಾಷ್ಟ್ರ‌ಧ್ವಜ ಹಾರಿಸಲಾಗಿಲ್ಲ.

ತಹಶೀಲ್ದಾರ್ ಸಹಿತ ಅಧಿಕಾರಿಗಳು, ಜನಪ್ರತಿನಿಧಿಗಳು ನೆರಳಲ್ಲಿ ನಿಂತಿದ್ದರೆ, ಮಕ್ಕಳು‌ ಬಿಸಿಲಲ್ಲೇ ನಿಂತಿದ್ದಾರೆ.