ಬೆಳ್ಳಿಪ್ಪಾಡಿಯ ಕಿರಣ್ ವಿಷ ಸೇವಿಸಿ ಆತ್ಮಹತ್ಯೆ

0

ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿ ಬನದಮೂಲೆ ಹೊನ್ನಪ್ಪ ಗೌಡ ಮತ್ತು ಕುಸುಮಾ ದಂಪತಿಗಳ ಪುತ್ರ ಕಿರಣ್ ಬೆಳ್ಳಿಪ್ಪಾಡಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

ಲಾರಿ ಚಾಲಕರಾಗಿದ್ದ ಇವರು ವಾರದ ಹಿಂದೆ ಪಂಜಿಕಲ್ಲು ಬಳಿ ಇಲಿಪಾಷಾಣ ಸೇವಿಸಿದ್ದರು.

ತಾನು ಇಲಿಪಾಷಾಣ ಸೇವಿಸಿರುವುದಾಗಿ ಅವರು ತನ್ನ ಪರಿಚಯಸ್ಥರಿಗೆ ಹೇಳಿದ್ದರಿಂದ ಅವರನ್ನು ಸುಳ್ಯ ಆಸ್ಪತ್ರೆಗೆ ಕರೆ ತರಲಾಯಿತು. ಸುಳ್ಯದಲ್ಲಿ ಚಿಕಿತ್ಸೆ ನೀಡಿದ ವೈದ್ಯರು ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದರು. ಬಳಿಕ ಮಂಗಳೂರು ಎಜೆ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಒಳರೋಗಿಯಾಗಿದ್ದ ಇವರು ನ. 2 ರಂದು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಮೃತರು ತಂದೆ, ತಾಯಿ, ಪತ್ನಿ ಪುನೀತ, ಇಬ್ಬರು ಮಕ್ಕಳು, ಸಹೋದರ ಕೀರ್ತನ್, ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.