ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯ : ಅಪಾಯದಿಂದ ಪಾರು
ಸುಳ್ಯ ಪರಿವಾರಕಾನ ಬಳಿ ತಿರುವಿನಲ್ಲಿ ಖಾಸಗಿ ಮಿನಿ ಬಸ್ಸೊಂದು ಪಲ್ಟಿಯಾಗಿ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾದ ಘಟನೆ ನ ೨ ರಂದು ಮುಂಜಾನೆ ಸಂಭವಿಸಿದೆ.















ಪ್ರವಾಸ ಮುಗಿಸಿ ತುಮಕೂರಿಗೆ ಹಿಂದಿರುಗುತ್ತಿದ್ದ ಮಿನಿ ಬಸ್ ಪರಿವಾರಕಾನ ಗಾರ್ಡ್ ಶೆಡ್ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಹಳ್ಳಕ್ಕೆ ಪಲ್ಟಿಯಾಗಿದೆ.
ಘಟನೆಯಿಂದ ಬಸ್ಸಿನಲ್ಲಿದ್ದ ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ತರಚಿದ ಗಾಯಗಳು ಸಂಭವಿಸಿ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯ ವೇಳೆ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಗಾಯಾಳುಗಳಿಗೆ ನೆರವಾದರು.



