ಅರಂತೋಡು ಜಮಾಅತ್ ವತಿಯಿಂದ ಪವಿತ್ರ ಉಮ್ರಾ ಯಾತ್ರೆಗೆ ತೆರಳಲಿರುವ ಅಶ್ರಫ್ ಗುಂಡಿಯವರಿಗೆ ಬೀಳ್ಕೊಡುಗೆ

0

ಅರಂತೋಡು ಜಮಾಅತ್ ಅನ್ವಾರುಲ್ ಹುಧಾ ಯಂಗ್ ಮೆನ್ಸ್ ಎಸೋಸಿಯೇಶನ್ ದಿಕ್ರ್ ಸ್ವಲಾತ್ ಸಮಿತಿ ಹಾಗೂ ಎಸ್.ಕೆ.ಎಸ್.ಎಸ್.ಎಫ್ ಅರಂತೊಡು ಶಾಖೆ ಇವುಗಳ ಜಂಟೀ ಆಶ್ರಯದಲ್ಲಿ ಪವಿತ್ರ ಉಮ್ರಾ ನಿರ್ವಹಿಸಲು ಪವಿತ್ರ ಮಕ್ಕಾಕ್ಕೆ ತೆರಳಲಿರುವ ಅರಂತೋಡು ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಅಶ್ರಫ್ ಗುಂಡಿಯವರಿಗೆ ಬೀಳ್ಕೊಡುಗೆ ಸಮಾರಂಭವು ನ.3 ರಂದು ಅರಂತೋಡು ನುಸ್ರತುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ನಡೆಯಿತು. ಉಪಾಧ್ಯಕ್ಷ ಹಾಜಿ ಕೆ.ಎಂ ಮಹಮ್ಮದ್ ಅಧ್ಯಕ್ಷತೆ ವಹಿಸಿದರು. ಖತೀಬರಾದ ಬಹು| ಇಸ್ಮಾಯಿಲ್ ಫೈಝಿ ಗಟ್ಟಮನೆ ದುವಾ ನೆರವೇರಿಸಿದರು. ಮುಖ್ಯ ಅತಿಥಿಗಳಾದ ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧಕ್ಷ ಟಿ.ಎಂ ಶಹೀದ್ ತೆಕ್ಕಿಲ್ ಹಾಗೂ ನಿವೃತ್ತ ಉಪನ್ಯಾಸಕ ಎ.ಅಬ್ದುಲ್ಲ ಮಾತನಾಡಿ ಸರಳ ಸಜ್ಜನಿಕೆಯ ಪ್ರಾಮಾಣಿಕ ವ್ಯಕ್ತಿತ್ವದ ಅಶ್ರಫ್ ಗುಂಡಿಯವರ ಬಗ್ಗೆ ಗುಣಗಾನ ಮಾಡಿದರು. ಸದರ್ ಅಶ್ರಫ್ ಮುಸ್ಲಿಯಾರ್, ಪಠೇಲ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬದುರುದ್ಧೀನ್ ಪಠೇಲ್, ದುಬಾಯಿ ಸಮಿತಿ ಕೋಶಾಧಿಕಾರಿ ಸೈಫುದ್ಧೀನ್ ಪಠೇಲ್, ದಿಕ್ರ್ ಸ್ವಲಾತ್ ಸಮಿತಿ ಅಧ್ಯಕ್ಷ ಕೆ.ಎಸ್ ದಿಕ್ರ್ ಸ್ವಲಾತ್ ಸಮಿತಿ ಅಧ್ಯಕ್ಷ ಕೆ.ಎಸ್ ಇಬ್ರಾಹಿಂ ಕುಕ್ಕುಂಬಳ, ಅನ್ವಾರುಲ್ ಹುಧಾ ಯಂಗ್ ಮೆನ್ಸ್ ಎಸೋಸಿಯೇಶನ್ ಕಾರ್ಯದರ್ಶಿ ಫಸೀಲು, ಅಮೀರ್ ಕುಕ್ಕುಂಬಳ, ಸಂಶುದ್ಧೀನ್ ಪೆಲ್ತಡ್ಕ ಶುಭ ಹಾರೈಸಿದರು. ಜಮಾಅತ್ ಕಾರ್ಯದರ್ಶಿ ಕೆ.ಎಂ ಮೂಸಾನ್, ಕೋಶಾಧಿಕಾರಿ ಕೆ.ಎಂ ಅಬೂಬಕ್ಕರ್ ಪಾರೆಕ್ಕಲ್ ನಿರ್ದೇಶಕರಾದ ಹಾಜಿ ಅಬ್ದುಲ್ ಖಾದರ್ ಪಠೇಲ್, ಕೆ.ಎಂ ಮೊಯಿದು ಕುಕ್ಕುಂಬಳ, ಎ.ಹನೀಫ್ ಮುಜೀಬ್ ಅರಂತೋಡು, ಸೌದಿ ಸಮಿತಿ ಕಾರ್ಯದರ್ಶಿ ಇಸಾಕುದ್ಧೀನ್, ಸಹಾಯಕ ಅಧ್ಯಾಪಕ ಅಬ್ದುಲ್ ರಹಿಮಾನ್ ಮುಸ್ಲಿಯಾರ್, ದುಬೈ ಸಮಿತಿ ಸದಸ್ಯರಾದ ಕೆ.ಎಂ ಅನ್ವಾರ್, ಅಬ್ದುಲ್ ಶರೀಫ್ ಪಠೇಲ್, ಎಸ್.ಕೆ.ಎಸ್.ಎಸ್.ಎಫ್ ಅಧ್ಯಕ್ಷ ಎಸ್. ಜುಬೈರ್ ಸಂಶುಧ್ಹೀನ್ ಕ್ಯೂರ್, ಹಾಜಿ ಅಝಾರುದ್ಧೀನ್ , ಟಿ.ಎಂ ಜಾವೆದ್ ತೆಕ್ಕಿಲ್ ಎ.ಉಮ್ಮರ್, ಕೆ.ಎಂ ಇಸ್ಮಾಯಿಲ್ , ಸಂಶುದ್ಧೀನ್ ಕೆ.ಎ.ಯು, ಆಶಿಕ್ ಕುಕ್ಕುಂಬಳ, ಸಮದ್ ಗುಂಡಿ, ಎಸ್.ಇ ಮೊಯಿದುಕುಟ್ಟಿ, ಎ.ಹನೀದ್, ಇಕ್ಬಾಲ್ ಬೆಳ್ಳಾರೆ, ಇನಾಚ್ ಮೊದಲಾದವರು ಉಪಸ್ಥಿತರಿದ್ದರು.