ಅರಂತೋಡಿನಲ್ಲಿ ಬೈಕ್ ಸ್ಕಿಡ್ ಸವಾರರಿಗೆ ಗಾಯ

0

ಅತಂತೋಡಿನ ನಾಯರ ಪೆಟ್ರೋಲ್‌ ಬಂಕ್ ಸಮೀಪ ಬೈಕ್ ಸ್ಕಿಡ್ ಆಗಿ ಸವಾರರಿಬ್ಬರು ಗಾಯಗೊಂಡ ಘಟನೆ ನ.3ರಂದು ರಾತ್ರಿ ವರದಿಯಾಗಿದೆ.

ತನುಷ್ ಎಂಬವರು ಬೈಕ್ ಚಲಾಯಿಸುತ್ತಿದ್ದು, ಗೋಪಾಲ ಪಾರೆಮಜಲು ಎಂಬವರು ಹಿಂಬದಿ ಸವಾರರಾಗಿದ್ದರು. ಬೈಕ್ ಸ್ಕಿಡ್ ಆಗಿ ಇಬ್ಬರೂ ರಸ್ತೆಗೆ ಬಿದ್ದರು. ಅವರಿಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಯಿತು. ಗೋಪಾಲರು ಚಿಕಿತ್ಸೆ ಪಡೆದು ಮನೆಗೆ ಬಂದಿದ್ದಾರೆ.‌ ತನುಷ್ ರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದುಬಂದಿದೆ.