ಕುಕ್ಕೆ ಸುಬ್ರಹ್ಮಣ್ಯದಲ್ಲಿ ರವೀಂದ್ರ ಕುಮಾರ್ ರುದ್ರಪಾದರಿಂದ ಚಾಲನೆ

ಅರಣ್ಯ ಇಲಾಖೆಯಿಂದ ರೈತರು, ಕೃಷಿಕರು, ಗ್ರಾಮಸ್ಥರಿಗೆ ಆಗುತ್ತಿರುವ ತೊಂದರೆಗಳ ವಿರುದ್ಧ ಮಲೆನಾಡು ಜನಹಿತ ರಕ್ಷಣಾ ವೇದಿಕೆ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟದ ಭಾಗವಾಗಿ ಇಂದು ಸುಬ್ರಹ್ಮಣ್ಯದಿಂದ ಬಲ್ಯದವರೆಗೆ ರೈತ ಜಾಗೃತಿ ರ‍್ಯಾಲಿ ನಡೆಯುತಿದ್ದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸುಬ್ರಹ್ಮಣ್ಯ ಐನೆಕಿದು ಪ್ರಾ.ಕೃ.ಪ.ಸ.ಸಂಘದ ಮಾಜಿ ಅಧ್ಯಕ್ಷ ರವೀಂದ್ರ ಕುಮಾರ್ ರುದ್ರಪಾದ ರ‍್ಯಾಲಿಗೆ ಚಾಲನೆ ನೀಡಿದರು.
















ಬಳಿಕ ಕುಲ್ಕುಂದ, ಕೈಕಂಬ, ಬಿಳಿನೆಲೆ, ನೆಟ್ಟಣ, ಸುಂಕದಕಟ್ಟೆ, ಐತ್ತೂರು, ಮರ್ಧಾಳ, ಕಡಬ, ಹೊಸಮಠ ಮೂಲಕ ಬಲ್ಯಕ್ಕೆ ರ‍್ಯಾಲಿ ಸಾಗಿತು. ಬಹುತೇಕರು ಬೈಕ್ ನಲ್ಲಿ
ರ‍್ಯಾಲಿಯಲ್ಲಿ ಪಾಲ್ಗೊಂಡರು.
ರಮಾನಂದ ಎಣ್ಣೆಮಜಲು, ಮನೀಷ್ ಪದೇಲ, ಅಶೋಕ್ ಮೂಲೆಮಜಲು, ಜಯಪ್ರಕಾಶ್ ಕೂಜುಗೋಡು, ವೆಂಕಟ್ ವಳಲಂಬೆ, ಮೀರಾ ಸಾಹೇಬ್, ಅಚ್ಚುತ ಗೌಡ, ದಿನೇಶ್ ಸಂಪ್ಯಾಡಿ, ಗಿರೀಶ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.











