ಬೆಳ್ಳಿರಥ ನಿರ್ಮಾಣ : ಸುಳ್ಯದ ಮೂವರು ಯುವಕರು ಭಾಗಿ

0

ಡಾ| ಕೆ.ವಿ.ರೇಣುಕಾಪ್ರಸಾದ್ ದಂಪತಿಗಳಿಂದ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವರಿಗೆ ಬೆಳ್ಳಿರಥ ಸಮರ್ಪಣೆ ನಡೆಯಲಿದ್ದು,

ಈ ಬೆಳ್ಳಿರಥವು ರಥಶಿಲ್ಪಿಜಕಣಾಚಾರಿ ಪ್ರಶಸ್ತಿ ಪುರಸ್ಕೃತರಾದ ಕೋಟೇಶ್ವರ ಬಿ. ಲಕ್ಷ್ಮೀನಾರಾಯಣ ಆಚಾರ್ಯರು ಮತ್ತು ಪುತ್ರ ಶ್ರೀ ರಾಜಗೋಪಾಲ ಆಚಾರ್ಯರಿಂದ ನಿರ್ಮಾಣಗೊಂಡಿದೆ. ರಥ ನಿರ್ಮಾಣದ ಪುಣ್ಯ ಕಾರ್ಯದಲ್ಲಿ ಸುಳ್ಯ ತಾಲೂಕಿನ ಮೂವರು ಯುವಕರು ಪಾಲ್ಗೊಂಡಿದ್ದು, ಕೀರ್ತನ್ ಬಾಳುಗೋಡು, ಪುನೀತ್ ತುಪ್ಪದಮನೆ ಹಾಗೂ ಸಂದೇಶ್ ( ಚಂದ್ರಶೇಖರ)ಕಾಯಾರ ಕಾಣಿಯೂರು ಮನೆ ಇವರು ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ.