ಮೈ ಭಾರತ್ ದ.ಕ. ಜಿಲ್ಲೆಯ ವತಿಯಿಂದ ಯುವಜನರಿಗೆ ವಿಪತ್ತು ನಿರ್ವಹಣಾ ತರಬೇತಿ

0

ಅರ್ಜಿ ಹಾಕಲು ಬುಧವಾರ ಕೊನೆಯ ದಿನ

ಕೇಂದ್ರ ಸರಕಾರದ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ಮೈ ಭಾರತ್ ವಿಭಾಗದಡಿ ದ.ಕ.ಜಿಲ್ಲಾ ಮೈ ಭಾರತ್ ವತಿಯಿಂದ ಪ್ರಕೃತಿ ವಿಕೋಪ ನಿರ್ವಹಣಾ ತರಬೇತಿ ಆಪತ್ ಮಿತ್ರ 2025-26 ಕಾರ್ಯಕ್ರಮ ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಘಟಕಗಳ ಸಹಯೋಗದಲ್ಲಿ ಡಿಸೆಂಬರ್ ನಡೆಯಲಿಕ್ಕಿದೆ.

18 ರಿಂದ 40 ರ ವಯೋಮಾನದವರು ಈ ತರಬೇತಿಯಲ್ಲಿ ಭಾಗವಹಿಸಬಹುದು. 7 ದಿನಗಳ ಕಾಲ ನಡೆಯಲಿರುವ ಈ ಸನಿವಾಸ ತರಬೇತಿ ಕಾರ್ಯಾಗಾರ ಇದಾಗಿದ್ದು, ತರಬೇತಿಯಲ್ಲಿ ಭಾಗವಹಿಸಿದವರಿಗೆ ಎಮರ್ಜೆನ್ಸಿ ಕಿಟ್ ಹಾಗೂ ಸರ್ಟಿಫಿಕೇಟ್ ನೀಡಲಾಗುವುದು. ಉತ್ತಮವಾಗಿ ತರಬೇತಿಯಲ್ಲಿ ಭಾಗವಹಿಸಿದವರಿಗೆ ರಾಜ್ಯಮಟ್ಟದ ತರಬೇತುದಾರರಾಗಿಯೂ ಕೂಡ ಆಯ್ಕೆಯಾಗುವ ಅವಕಾಶವಿದೆ.

ತರಬೇತಿಯಲ್ಲಿ ಭಾಗವಹಿಸಲಿಚ್ಛಿಸುವ ಯಿವಕ ಯುವತಿಯರು ದಿನಾಂಕ 19.11.2025 ಬುಧವಾರದೊಳಗೆ ಈ ಕೆಳಗಿನ ನಂಬರಿಗೆ ಕರೆ ಮಾಡಿ ತಿಳಿಸಬೇಕೆಂದು ಜಿಲ್ಲಾ ಯುವಕಾರ್ಯ ಮತ್ತು ಕ್ರೀಡಾಧಿಕಾರಿ ಉಲ್ಲಾಸ್ ಕೆ.ಟಿ.ಕೆ. ತಿಳಿಸಿದ್ದಾರೆ.