ಕೋಲ್ಚಾರಿನ ಕಣಕ್ಕೂರು ತಿರುವಿನಲ್ಲಿ ಬೆಳಗ್ಗಿನ ಜಾವ ಸಂಭವಿಸಿದ ಘಟನೆ
ಕೋಲ್ಚಾರಿನ ಕಣಕ್ಕೂರು ಎಂಬಲ್ಲಿ ಕಾಡು ಹಂದಿ ರಸ್ತೆಗೆ ಅಡ್ಡ ಬಂದು ಆಲ್ಟೋ ಕಾರೊಂದು ಪಲ್ಟಿಯಾದ ಘಟನೆ ನ.16 ರಂದು ಬೆಳಗ್ಗಿನ ಜಾವ ಸಂಭವಿಸಿರುವುದಾಗಿ ವರದಿಯಾಗಿದೆ.

ಸುಳ್ಯದಿಂದ ಕೇರಳದ ಬಂದಡ್ಕ ಕಡೆಗೆ ಸಂಚರಿಸುತ್ತಿದ್ದ ಆಲ್ಟೊ ಕಾರಿಗೆ ಬೆಳಗ್ಗಿನ ಜಾವ 3 ಗಂಟೆ ಹೊತ್ತಿಗೆ ಸಡನ್ನಾಗಿ ಕಾಡು ಹಂದಿಯೊಂದು ರಸ್ತೆಗೆ ಜಿಗಿಯಲ್ಪಟ್ಟು ಅಡ್ಡಬಂದುದ್ದರಿಂದ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಮೋರಿಯ ಕೆಳಗೆ ಉರುಳಿತು. ಕಾರಿನಲ್ಲಿ ಚಾಲಕ ಮಾತ್ರವಿದ್ದು ಅದೃಷ್ಟವಶಾತ್ ಸಣ್ಣ ಪುಟ್ಟಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿರುವುದಾಗಿ ತಿಳಿದು ಬಂದಿದೆ.















ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಸುಳ್ಯದಿಂದ ಟೋಯಿಂಗ್ ತರಿಸಿ ಕಾರನ್ನು ಮೇಲಕ್ಕೆತ್ತಲಾಯಿತು. ಸ್ಥಳೀಯರು ಸಹಕರಿಸಿದರು.










