ವಿರಾಜಪೇಟೆ ಗೌಡ ಸಮಾಜದ ಸಭಾಭವನ ಕಟ್ಟಲು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಸ್ಥಾಪಕಾಧ್ಯಕ್ಷರಾಗಿದ್ದ ದಿ.ಡಾ.ಕುರುಂಜಿ ವೆಂಕಟ್ರಮಣ ಗೌಡರು ಜಾಗ ಮತ್ತು ಕಟ್ಟಡವೊಂದನ್ನು ಖರೀಸಿಕೊಟ್ಟಿದ್ದರು. ಆದರೆ ಆ ಜಾಗದ ದಾಖಲೆ ಪತ್ರ ವಿರಾಜಪೇಟೆ ಗೌಡ ಸಮಾಜದ ಹೆಸರಿಗೆ ಆಗಿರಲಿಲ್ಲ. ಜಾಗ ಡಾ.ಚಿದಾನಂದ್ ಹಾಗೂ ಡಾ.ರೇಣುಕಾಪ್ರಸಾದರ ಹೆಸರಲ್ಲಿತ್ತು.
















ಇತ್ತೀಚೆಗೆ ಅಲ್ಲಿಯ ಸಮಾಜದವರ ವಿನಂತಿಯ ಮೇರೆಗೆ ಡಾ.ಚಿದಾನಂದರು ಮತ್ತು ಡಾ.ರೇಣುಕಾಪ್ರಸಾದರು ಕೆಲವು ಕೋಟಿ ಬೆಲೆಬಾಳುವ ಆ ಜಾಗವನ್ನು ವಿರಾಜಪೇಟೆ ಗೌಡ ಸಮಾಜಕ್ಕೆ ನೀಡಲು ಒಪ್ಪಿ, ತಮ್ಮ ಮಕ್ಕಳಾದ ಅಕ್ಷಯ್ ಕೆ.ಸಿ. ಮತ್ತು ಮೌರ್ಯ ಆರ್.ಪ್ರಸಾದ್ ರಿಗೆ ಪವರ್ ಆಫ್ ಅಟಾರ್ನಿ ನೀಡಿದ ಮೇರೆಗೆ, ಮಕ್ಕಳಿಬ್ಬರೂ ಮಡಿಕೇರಿ ಸಬ್ ರಿಜಿಸ್ತ್ರಾರ್ ಕಚೇರಿಗೆ ಹೋಗಿ ಆ ಜಾಗವನ್ನು ಗೌಡ ಸಮಾಜಕ್ಕೆ ಬರೆದುಕೊಟ್ಡಿದ್ದರು.ಇದಕ್ಕಾಗಿ ಇಂದು ನ.16 ಆದಿತ್ಯವಾರ ವಿರಾಜಪೇಟೆ ಗೌಡ ಸಮುದಾಯದಲ್ಲಿ ಡಾ.ಕುರುಂಜಿಯವರ ಪುತ್ರರಾದ ಡಾ.ಚಿದಾನಂದ್ ಹಾಗೂ ಡಾ.ರೇಣುಕಾಪ್ರಸಾದರನ್ನು ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮ ನಡೆಯಿತು.
ಇಬ್ಬರೂ ಜತೆಯಾಗಿ ಕುಳಿತು ಸನ್ಮಾನ ಸ್ವೀಕರಿಸಿ, ಇಬ್ಬರೂ ಪರಸ್ಪರ ಉತ್ತಮ ಅಭಿಪ್ರಾಯದ ಮಾತುಗಳನ್ನು ಆಡಿ ಬಂದುದು ಗೌಡ ಸಮಾಜದವರಲ್ಲಿ ಸಂತೋಷದ ಭಾವನೆ ಮೂಡಿಸಿತು.










