ಕೆ.ವಿ.ಜಿ. ಸುಳ್ಯಹಬ್ಬದ ಪ್ರಯುಕ್ತ ಪ್ರತೀ ವರ್ಷದಂತೆ ಈ ಬಾರಿಯೂ ದಶಂಬರ 25 ರಂದು ಕ್ರೀಡಾಕೂಟ ನಡೆಯಲಿದ್ದು, ಪುರುಷರ ಮತ್ತು ಮಹಿಳೆಯರ ತಾಲೂಕು ಮಟ್ಟದ ವಾಲಿಬಾಲ್ ಹಾಗೂ ಕಬಡ್ಡಿ ಪಂದ್ಯಾಟ ಏರ್ಪಡಿಸಲಾಗಿದೆ ಎಂದು ಕ್ರೀಡಾ ಸಮಿತಿ ಸಂಚಾಲಕ ದೊಡ್ಡಣ್ಣ ಬರೆಮೇಲು ತಿಳಿಸಿದ್ದಾರೆ.
” ಪುರುಷರ ವಾಲಿಬಾಲ್ ಮತ್ತು ಕಬಡ್ಡಿ ಪಂದ್ಯಗಳನ್ನು ಗ್ರಾಮ ತಂಡಗಳ ಮಧ್ಯೆ ನಡೆಸಲು ನಿರ್ಧರಿಸಲಾಗಿದ್ದು, ಆಯಾ ಗ್ರಾಮದವರು ಆಯಾ ಗ್ರಾಮದ ತಂಡದಲ್ಲಿ ಆಡಬೇಕು. ಆಟಗಾರರು ತಮ್ಮ ಆಧಾರ್ ಕಾರ್ಡ್ ತೋರಿಸುವುದು ಕಡ್ಡಾಯವಾಗಿರುತ್ತದೆ.















ಮಹಿಳೆಯರ ತಂಡಗಳಲ್ಲಿ ಭಾಗವಹಿಸುವ ಮಹಿಳೆಯರು ತಾಲೂಕಿನವರೇ ಆಗಿರಬೇಕು ” ಎಂದು ಅವರು ತಿಳಿಸಿದರು. ಕಾಲೇಜು ವಿದ್ಯಾರ್ಥಿಗಳು ಭಾಗವಹಿಸುವುದಾದರೆ ಆಯಾ ಕಾಲೇಜು ತಂಡಗಳಿಗೆ ಅವಕಾಶವಿದೆ. ಐ.ಡಿ. ಕಾರ್ಡ್ ಕಡ್ಡಾಯವಾಗಿರುತ್ತದೆ. ಸಾರ್ವಜನಿಕ ತಂಡ ರಚಿಸಿ ಆಡುವ ಮಹಿಳಾ ತಂಡಗಳಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿನಿಯರು ಭಾಗವಹಿಸಬಹುದು. ಆದರೆ ಅವರು ತಾಲೂಕಿನವರಾಗಿರಬೇಕು. ಅದಕ್ಕಾಗಿ ಆಧಾರ್ ಕಾರ್ಡ್ ಕಡ್ಡಾಯವಾಗಿರುತ್ತದೆ.
ಭಾಗವಹಿಸುವವರು ದಿನಾಂಕ 22.12.2025 ರ ಒಳಗೆ ನೋಂದಾಯಿಸಬೇಕು. ವಾಲಿಬಾಲ್ ಪಂದ್ಯಾಟಕ್ಕೆ ಭಾಗವಹಿಸಲಿಚ್ಛಿಸುವವರು ದೊಡ್ಡಣ್ಣ ಬರೆಮೇಲು (9449662384), ಜಯಪ್ರಕಾಶ್ ಕುಡೆಕಲ್ಲು (9632843046) ಇವರನ್ನು ಸಂಪರ್ಕಿಸಬೇಕು. ಕಬಡ್ಡಿಯಲ್ಲಿ ಭಾಗವಹಿಸಲಿಚ್ಛಿಸುವವರು ಉಮೇಶ್ ಪಂಜದಬೈಲು (9481147591) ಅಥವಾ ಕೆ.ಟಿ.ವಿಶ್ವನಾಥ (9448464593) ರನ್ನು ಸಂಪರ್ಕಿಸಬೇಕು.










